Friday, June 27, 2025
spot_imgspot_img
spot_imgspot_img

ಬಂಟ್ವಾಳ: ಹೃದಯಾಘಾತದಿಂದ ಅವಿವಾಹಿತ ಯುವಕ ಮೃತ್ಯು..!

- Advertisement -
- Advertisement -

ಬಂಟ್ವಾಳ: ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಬಂಟ್ವಾಳದಲ್ಲಿ ನಡೆದಿದೆ.

ಮೃತಪಟ್ಟ ಯುವಕ ಮೆಲ್ಕಾರ್ ನಿವಾಸಿ ಉದಯ ( 36) ಎಂದು ಗುರುತಿಸಲಾಗಿದೆ.

ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದ ಉದಯೋನ್ಮುಖ ಯುವಕ ಉದಯ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೆಲ್ಕಾರ್ ಬಿಜೆಪಿ ಪಕ್ಷದ ಬೂತ್ ಅಧ್ಯಕ್ಷ, ಜನಸ್ನೇಹಿಯಾಗಿ ,ಜನಸೇವಕನಾಗಿದ್ದ ಉದಯ ಅವರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು.

ಇಂದು ಬೆಳಿಗ್ಗೆ ಉದಯ ಎದ್ದೆಳಲಿಲ್ಲ ಎಂದು ಮನೆಯವರು ಎಚ್ಚರಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು ಗಮನಿಸಿ, ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಆತ ಹೃದಯಾಘಾತದಿಂದ ನಿಧನರಾಗಿರುವ ಬಗ್ಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿದ್ದಾರೆ.

- Advertisement -

Related news

error: Content is protected !!