Tuesday, July 1, 2025
spot_imgspot_img
spot_imgspot_img

ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಬೇಕಾಗಿದೆ ನೆರವು

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಎಂಬಲ್ಲಿಯ ಚೇತನ್ ಮತ್ತು ದಿವ್ಯ ದಂಪತಿಗಳ 4 ತಿಂಗಳ ಹೆಣ್ಣು ಮಗು ಕಳೆದ ಎರಡೂವರೆ ತಿಂಗಳಿಂದೀಚೆಗೆ ಹೃದಯ ಸಂಬಂದಿ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ದೂರದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆಟೋ ರಿಕ್ಷಾ ಚಾಲಕ ನಾಗಿರುವ ಚೇತನ್ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಸಂದರ್ಭದಲ್ಲಿ ಮಗುವಿನ ಈ ಅನಾರೋಗ್ಯದ ಘಟನೆಯಿಂದ ತನ್ನ ದೈನಂದಿನ ಬದುಕಿಗೆ ಆಕಾಶವೇ ಕಳಚಿಬಿದ್ದಂತಾಗಿದೆ. ಚೇತನ್ ದಿವ್ಯ ದಂಪತಿಗಳು ಕಳೆದ ಎರಡೂವರೆ ತಿಂಗಳಿನಿಂದ ಮಗುವಿನ ಜೊತೆ ಬೆಂಗಳೂರಿನಲ್ಲೇ ಬಾಡಿಗೆ ರೂಮಿನಲ್ಲಿ ವಾಸವಾಗಿರುವುದರಿಂದ ದೈನಂದಿನ ದುಡಿಮೆಯನ್ನೂ ದುಡಿಯಲಾಗದೆ ಖರ್ಚಿಗೆ ಹಣವನ್ನೂ ಹೊಂದಿಸಲಾಗದೆ ಕಣ್ಣೀರಿನಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ 4,20,000 ಹಣ ಖರ್ಚಾಗಿದ್ದು, ಹಲವಾರು ಕಡೆ ಸಾಲ ಮಾಡಿ ಈ ದುಡ್ಡನ್ನು ಹೊಂದಿಸಿರುತ್ತಾರೆ. ಇನ್ನು ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಈ ಬಡ ದಂಪತಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತೀಯೊಬ್ಬ ಸಹ್ರದಯಿ ಬಂಧುಗಳು ತಮ್ಮ ಕೈಲಾದ ಸಹಾಯವನ್ನು ಮಾಡಿ ಕಣ್ಣೀರಲ್ಲಿ ಮುಳುಗಿರುವ ಈ ಬಡ ಕುಟುಂಬಕ್ಕೆ ಆಧಾರವಾಗಬೇಕೆಂಬುದೇ ಉದ್ದೇಶವಾಗಿದೆ.

ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಅಥವಾ ಈ ಕೆಳಗಿನ ಗೂಗಲ್ ಪೇ ನಂಬರಿಗೆ ತಮ್ಮ ಕೈಲಾದ ಸಹಾಯಧನ ಜಮಾ ಮಾಡಬೇಕಾಗಿ ತಮ್ಮೆಲ್ಲರಲ್ಲಿ ವಿನಮೃತೆಯಿಂದ ಬೇಡಿಕೊಳ್ಳುತ್ತಿದ್ದೇವೆ.

ಬ್ಯಾಂಕ್ ಡೀಟೈಲ್ಸ್ :

Name: Chethan

Bank : Bank of Baroda

Acount No : 83700100002318

IFSC CODE : BARB0VJJAKR

Branch : Jakribettu, ಬಂಟ್ವಾಳ

ಗೂಗಲ್ ಪೇ ಡೀಟೈಲ್ಸ್ :

Google Pay No: 8495815864

Name : Yatish

- Advertisement -

Related news

error: Content is protected !!