ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ನುಗ್ಗಿ ನಗ-ನಗದು ಕಳವುಗೈದ ಘಟನೆ ಬಂಟ್ವಾಳದ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳದ ಸಜೀಪಮುನ್ನೂರು ಗ್ರಾಮದ ಜಯಲಕ್ಷ್ಮೀ ಎಂಬವರ ದೂರಿನಂತೆ ಇವರು ಸೆ. 07ರಂದು ತನ್ನ ಮನೆಗೆ ಬೀಗ ಹಾಕಿ, ತಾಯಿ ಮನೆ ಪುತ್ತೂರಿನ ಸಂಟ್ಯಾರ್ ಕೈಕಾರ್ ಎಂಬಲ್ಲಿಗೆ ಹೋಗಿರುತ್ತಾರೆ. ಸೆ23ರ ಸಂಜೆ ವೇಳೆ ಮನೆಗೆ ಹಿಂತಿರುಗಿ ಬಂದಾಗ ಮನೆಯ ಬಾಗಿಲಿನ ಡೋರ್ ಲಾಕ್ ಜಖಂ ಗೊಂಡಿದ್ದು, ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಮನೆಯ ಒಳ ಪ್ರವೇಶಿಸಿದ್ದು ಕಂಡುಬಂದಿರುತ್ತದೆ.
ಮನೆಯ ಹಿಂಬದಿ ಹೋಗಿ ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು, ಜಯಲಕ್ಷ್ಮೀಯವರು ಒಳಗೆ ಹೋಗಿ ನೋಡಿದಾಗ, ಮನೆಯಲ್ಲಿದ್ದ ಗೋಡ್ರೇಜ್ ಮತ್ತು ಬೇಡ್ ರೂಂನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2 ½ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000/- ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಮೌಲ್ಯ 1,25,000/- ಆಗಬಹುದು ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 159/2024 ಕಲಂ: 331(3),331(4),305 BNS-2023 ರಂತೆ ಪ್ರಕರಣ ದಾಖಲಾಗಿದೆ.