- Advertisement -
- Advertisement -
ಬಂಟ್ವಾಳ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮುಂಜೆ ಗ್ರಾಮದ ಪಾಂಡೇಲು ಎಂಬಲ್ಲಿ ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿ ಮೆಹಂದಿ ಕಾಯ೯ಕ್ರಮ ನಡೆಸಿದ ಫಟನೆ ಭಾನುವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಪುತ್ರ ತಿಲಕ್ ರಾಜ್ ಇವರ ಮದುವೆ ಕಾಯ೯ಕ್ರಮ ಮನೆಯಲ್ಲಿ ಜು.2ರಂದು ನಡೆದಿತ್ತು. ಇದಕ್ಕೆ 50 ಮಂದಿ ಪಾಲ್ಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಪರವಾನಿಗೆ ಪಡೆದುಕೊಂಡಿದ್ದರು. ಆದರೆ ಜು.1ರಂದು ರಾತ್ರಿ ಅವರ ಮನೆಯಲ್ಲಿ ನಡೆದ ಮೆಹಂದಿ ಕಾಯ೯ಕ್ರಮದಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಯುವಕರು ಗುಂಪು ಸೇರಿ ಡಿ.ಜೆ. ಧ್ವನಿ ವರ್ಧಕ ಬಳಸಿ ನೃತ್ಯ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಂಟ್ವಾಳ ಗ್ರಾಮಾಂತರ ಠಾಣೆ ಎಸೈ ಪ್ರಸನ್ನ ಎಂ.ಎಸ್. ನೇತೖತ್ವದ ಪೊಲೀಸರು ಮದುಮಗ ಮತ್ತು ಆತನ ತಂದೆಯ ವಿರುದ್ಧ ಭಾನುವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
- Advertisement -