Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ! – ಕೃತ್ಯ ನಡೆಯುವ ವೇಳೆ ಮನೆಯ ಸಿಸಿ ಕ್ಯಾಮರಾ ಆಫ್, ಹಿಂಬಾಗಿಲು ಓಪನ್ ಕುತೂಹಲ ಸೃಷ್ಟಿಸಿದ ಘಟನೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಮನೆಯೊಂದರಿಂದ ಚಿನ್ನಾಭರಣ ಕಳವು ನಡೆದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ನೇಲ್ಯಪಲ್ಕೆ ನಿವಾಸಿ ಖಾದರ್ ಅವರ ಮನೆಯಲ್ಲಿ ಕಳತನ ನಡೆದಿದ್ದು, ಸುಮಾರು 22 ಪವನ್ ಚಿನ್ನಾಭರಣ ಕಳವು ನಡೆದಿರುವ ಕುರಿತು ಅಂದಾಜಿಸಲಾಗಿದೆ.

ಕಳ್ಳತನ ನಡೆಯುವ ವೇಳೆ ಮನೆಯ ಸಿಸಿ ಕ್ಯಾಮರಾ ಆಫ್ ಆಗಿದ್ದು, ಹಿಂಬಾಗಿಲನ್ನು ತೆರೆಯಲಾಗಿದ್ದು, ಘಟನೆ ಕುತೂಹಲ ಸೃಷ್ಟಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳದವರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!