Friday, June 28, 2024
spot_imgspot_img
spot_imgspot_img

ಬಂಟ್ವಾಳ: ಅಪರಿಚಿತ ವ್ಯಕ್ತಿಗಳಿಂದ ಸಾರ್ವಜನಿಕವಾಗಿ ತಲವಾರು ಪ್ರದರ್ಶನ: ಪೊಲೀಸ್ ದಾಳಿ ವೇಳೆ ಆರೋಪಿಗಳು ಪರಾರಿ: ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಅಪರಿಚಿತ ವ್ಯಕ್ತಿಗಳು ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಿದ್ದ ಘಟನೆ ಬಂಟ್ವಾಳ ಬಡಗಬೆಳ್ಳೂರು ಎಂಬಲ್ಲಿ ನಡೆದಿದೆ.

ಸಾರ್ಜಜನಿಕವಾಗಿ ಮಾರಕಾಸ್ತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಹರೀಶ್ ಎಮ್ ಆರ್, ಪಿ.ಎಸ್.ಐ ,ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಸಾರ್ವಜನಿಕವಾಗಿ ಭಯವನ್ನುಂಟು ಮಾಡುತ್ತಿರುವುದು ಕಂಡುಬಂದಿರುತ್ತದೆ.

ಆರೋಪಿಗಳನ್ನು ಬೋಜರಾಜ , ವಿನೋದ್ , ವಿವೇಕ್ , ರಕ್ಷಿತ್‌ ,ರಕ್ಷಕ್, ಎಂದು ಗುರುತಿಸಲಾಗಿದೆ.

ಇಲಾಖಾ ವಾಹನ ಸ್ಥಳಕ್ಕೆ ಬರುವುದನ್ನು ಕಂಡ ಆರೋಪಿಗಳು ಪರಾರಿಯಾಗಿದ್ದು ಸ್ಥಳದಲ್ಲಿದ್ದ ಕೆ ಎ 70 3479ನೇ ರಿಕ್ಷಾದಲ್ಲಿ ಒಂದು ತಲವಾರು ಪತ್ತೆಯಾಗಿರುತ್ತದೆ. ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 69/2024, ಕಲಂ: 25(1ಬಿ) ಭಾರತೀಯ ಶಸ್ತಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!