Friday, May 3, 2024
spot_imgspot_img
spot_imgspot_img

ಬಂಟ್ವಾಳ: ಬಡ ಕುಟುಂಬಕ್ಕೆ ಆಸರೆಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ದಾಸಕೋಡಿ ನೆಲ್ಲಿ ಎಂಬಲ್ಲಿ ಗೀತಾ ರವೀಂದ್ರ ಪೂಜಾರಿ ತಾಯಿ ಮತ್ತು ತಮ್ಮನೊಂದಿಗೆ ಕಡು ಬಡತನದ ಕುಟುಂಬ ಜೀವನ ಸಾಗಿಸುತ್ತಿದ್ದರು.

ತಾಯಿ ಮತ್ತು ತಮ್ಮ ತೀರಿಕೊಂಡ ನಂತರ ಮನೆಯ ದುರಸ್ಥಿಯಿಂದ ಈ ಮನೆಯಲ್ಲಿ ವಾಸವಿರದೆ ತನ್ನ ಇಬ್ಬರು ಚಿಕ್ಕಮಕ್ಕಳೊಂದಿಗೆ ಹಲವಾರು ವರುಷ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದರು ಹೀಗಿರುವಾಗ ಈ ಬಗ್ಗೆ ತನ್ನ ಕಷ್ಟ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಸಹಾಯ ಹಸ್ತದ ಮನವಿಯನ್ನು ಸಲ್ಲಿಸಿದರು. ಇವರ ಕಷ್ಟದ ಜೀವನವನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಖಾವಂದರು ವಾತ್ಸಲ್ಯ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ರಿಪೇರಿಯ ಅನುದಾನ ಬಿಡುಗಡೆಗೊಳಿಸಿದರು.

ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಸೇವಾ ಪ್ರತಿನಿಧಿ ವಿದ್ಯಾ, ಗಣೇಶ್, ವಲಯ ಅಧ್ಯಕ್ಷ ತುಳಸಿ, ಜ್ಞಾನವಿಕಾಸ ವಿಟ್ಲ ಸಮನ್ವಯಧಿಕಾರಿ ವಿಜಯಲಕ್ಷ್ಮೀ, ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ಮಾಧವ ಸಾಲಿಯಾನ್ ಇವರ ಮುತುವರ್ಜಿಯೊಂದಿಗೆ ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡವು ಪೆರ್ನೆ ಘಟಕದ ಸಹಕಾರದೊಂದಿಗೆ ಮನೆ ರಿಪೇರಿ ಕೆಲಸ ಕಾರ್ಯ ಪ್ರಾರಂಭಿಸಿದರು .

ಅವಿರತ ಶ್ರಮದಾನದೊಂದಿಗೆ ಅವ್ಯವಸ್ಥೆಯಲ್ಲಿದ್ದ ಮನೆಯನ್ನು ವ್ಯವಸ್ಥಿತವಾಗಿ ರೂಪುಗೊಳಿಸಲಾಯಿತು. ಇದೀಗ ಜೂ.07ರಂದು ಸುಣ್ಣ ಬಣ್ಣ ಬಳಿದು ಹೊಸ ರೂಪದೊಂದಿಗೆ ವಾತ್ಸಲ್ಯ ಮನೆಯ ಗ್ರಹಪ್ರವೇಶ ಕಾರ್ಯದೊಂದಿಗೆ ಬಡ ಕುಟುಂಬಕ್ಕೆ ಹಸ್ತಾಂತರ ಕಾರ್ಯಕ್ರಮ ಜರವೇರಲಿರುವುದು. ಇಲ್ಲಿವರೆಗೆ ಬಾಡಿಗೆ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದ ಬಡ ಕುಟುಂಬ ತನ್ನ ಸ್ವಂತ ಮನೆಯಲ್ಲಿ ಜೀವನ ಸಾಗಿಸಲು ಸಹಕರಿಸಿದ ಸಂಬಂಧಪಟ್ಟ ಯೋಜನೆಯ ಎಲ್ಲರನ್ನೂ ಬಡ ಕುಟುಂಬ ಕೃತಜ್ಞತಾ ಭಾವದಿಂದ ಸ್ಮರಿಸುತ್ತಿದ್ದಾರೆ.

- Advertisement -

Related news

error: Content is protected !!