Tuesday, April 16, 2024
spot_imgspot_img
spot_imgspot_img

ಯುಎಇ ‘ಗೋಲ್ಡನ್ ವೀಸಾ’ ಪಡೆದ ಬಂಟ್ವಾಳದ ಬಶೀರ್

- Advertisement -G L Acharya panikkar
- Advertisement -

ಬಂಟ್ವಾಳ: ಯುನೈಟೆಡ್ ಸ್ಟೇಟ್ಸ್ ಎಮಿರೇಟ್ಸ್ (ಯು.ಎ.ಇ.) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ ‘ಗೋಲ್ಡನ್ ವೀಸಾ’ ವನ್ನು ದುಬೈಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಬಂಟ್ವಾಳದ ಬಶೀರ್ ಮತ್ತು ಅವರ ಕುಟುಂಬಕ್ಕೆ ನೀಡಿದೆ.

ಕೊರೋನ ಸಂಧರ್ಭದಲ್ಲಿ ಯುಎಇ ಯಲ್ಲಿ ಮಾಡಿದ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರಕಾರವು ಬಶೀರ್ ಅವರಿಗೆ ಗೋಲ್ಡನ್ ವೀಸಾ ನೀಡುವ ಮೂಲಕ ಪುರಸ್ಕರಿಸಿದೆ. ಬಂಟ್ವಾಳದ ಅಬೂಬಕ್ಕರ್ ಯಾನೆ ಅಬ್ಬೋನು ಎಂಬವರ ಪುತ್ರರಾಗಿರುವ ಬಶೀರ್ ಅವರು 27 ವರ್ಷಗಳಿಂದ ಯು.ಎ.ಇ.ಯಲ್ಲಿ ಸೇವೆಯಲ್ಲಿದ್ದಾರೆ. ‘ಗೋಲ್ಡನ್ ವೀಸಾವು ಯು.ಎ.ಇ.ಯಲ್ಲಿ ಹತ್ತು ವರ್ಷಗಳ ವಾಸ್ತವ್ಯಕ್ಕೆ ಅವಕಾಶ ನೀಡುವ ವೀಸಾವಾಗಿದ್ದು ಬಶೀರ್ ಮತ್ತು ಅವರ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಈ ಗೋಲ್ಡನ್ ವೀಸಾ’ ಲಭಿಸಿದೆ.

ಯು.ಎ.ಇ.ಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಅಧೀನದಲ್ಲಿ 8 ಆಸ್ಪತ್ರೆಗಳು, 150ರಷ್ಟು ಕ್ಲಿನಿಕ್ ಗಳು, 250 ರಷ್ಟು ಫಾರ್ಮಸಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜನರಲ್ ಮೆನೇಜರ್ ಆಗಿ ಬಶೀರ್ ಬಂಟ್ವಾಳ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೊನ ಸಂದರ್ಭದಲ್ಲಿ ಬಶೀರ್ ಬಂಟ್ವಾಳ್ ನೇತೃತ್ವದಲ್ಲಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ವತಿಯಿಂದ ಯು.ಎ.ಇ.ಯಾದ್ಯಂತ ಮಾಡಿರುವ ಮಾನವೀಯ ಸೇವೆ ಅಲ್ಲಿನ ಸರಕಾರದ ಅಭಿನಂದನೆಗೆ ಪಾತ್ರವಾಗಿತ್ತು.

ಕೊರೋನ ನಿಯಂತ್ರಿಸಲು ಲಾಕ್ ಡೌನ್ ಹೇರಿದ್ದ ಸಂದರ್ಭದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ದಿನನಿತ್ಯ ಸಿದ್ಧ ಆಹಾರ, ಆಹಾರ ಸಾಮಗ್ರಿಗಳ ಕಿಟ್, ಆರೋಗ್ಯ ತಪಾಸಣೆ, ವಸತಿ ರಹಿತರಿಗೆ ವಸತಿ ವ್ಯವಸ್ಥೆ, ಊರಿಗೆ ಮರಳುವವರಿಗೆ ವಿವಿಧ ಸವಲತ್ತುಗಳನ್ನು ಬಶೀರ್ ಬಂಟ್ವಾಳ ನೇತೃತ್ವದಲ್ಲಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ಮಾಡಿತ್ತು. ಇದಕ್ಕಾಗಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ಅನ್ನು ಯು.ಎ.ಇ. ಸರಕಾರ ಪ್ರಮಾಣ ಪತ್ರ ನೀಡಿ ಗೌರವಿಸಿತ್ತು

- Advertisement -

Related news

error: Content is protected !!