Saturday, June 28, 2025
spot_imgspot_img
spot_imgspot_img

ಐಪಿಎಲ್ ಮೂರು ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

- Advertisement -
- Advertisement -

ನವದೆಹಲಿ: ಈ ಬಾರಿಯ ಐಪಿಎಲ್ ಸೀಸನ್ ಸೇರಿದಂತೆ 2026 ಹಾಗೂ 2027ರ ಸೀಸನ್‌ಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಇಂದು ಭಾರತೀಯ ಕ್ರಿಕೆಟ್ ಮಂಡಳಿಯು 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿ ಪ್ರಕಟಿಸಿದ್ದು, ಜೊತೆಗೆ 2026 ಹಾಗೂ 2027ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸಾಮಾನ್ಯವಾಗಿ ಬಿಸಿಸಿಐ ಪಂದ್ಯಗಳು ಸಮೀಪಿಸುತ್ತಿದ್ದಂತೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆದರೆ ಈ ಬಾರಿ ಮೂರು ಸೀಸನ್‌ಗಳ ವೇಳಾಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ತಿಂಗಳ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.

ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

- Advertisement -

Related news

error: Content is protected !!