Monday, June 29, 2026
spot_imgspot_img
spot_imgspot_img

ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಸೆರೆ!

- Advertisement -
- Advertisement -

ಬೆಳಗಾವಿ: ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಕೆಎಸ್ ಆರ್ ಟಿಸಿ ಸಿಬ್ಬಂದಿ ಬಸವರಾಜ ವಿ. ನರಸನ್ನವರ್ ಎನ್ನಲಾಗಿದೆ. ಆರೋಪಿ ಬಸವರಾಜ, ಬೆಳಗಾವಿ ಮೂರನೇ ಬಸ್ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.

ತಮ್ಮದೇ ಕಚೇರಿಯ ಸಿಬ್ಬಂದಿಯೆಂದು ಮಹಿಳಾ ಸಿಬ್ಬಂದಿ ಆತನನ್ನು ಮನೆಗೆ ಕರೆದಿದ್ದಾರೆ. ಸಹೋದ್ಯೋಗಿಗೆ ಟೀ ಮಾಡಿಕೊಡೋಣಾ ಎಂದು ಮಹಿಳಾ ಸಿಬ್ಬಂದಿ ಮನೆಯ ಒಳಗಡೆ ಹೋದಾಗ ಆರೋಪಿ ಅತ್ಯಾಚಾರ ಮಾಡುವುದಕ್ಕೆ ಯತ್ನಿಸಿದ್ದಾನೆ. ಮಹಿಳೆ ಕಿರುಚಿಕೊಂಡಾಗ ಅಕ್ಕಪಕ್ಕದ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಬಸವರಾಜ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ಕುರಿತು ಬುಧವಾರ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಕೆಎಸ್ಆರ್‌ಟಿಸಿ ಡಿಸಿ ಪಿ‌.ವೈ. ನಾಯಕ್ ಬಸವರಾಜ ಅಮಾನತ್ತು ಮಾಡಿದ್ದಾರೆ.

- Advertisement -

Related news

error: Content is protected !!