Friday, June 27, 2025
spot_imgspot_img
spot_imgspot_img

ಕೊಕ್ಕಡ : ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಕೊಕ್ಕಡದ ಮಹಿಳೆಗೆ ಲಕ್ಷಾಂತರ ರೂ. ವಂಚನೆ

- Advertisement -
- Advertisement -

ಕೊಕ್ಕಡ : ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಓ.ಟಿ.ಪಿ ಪಡೆದು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿದ ಪ್ರಕರಣ ಜು.26ರಂದು ವರದಿಯಾಗಿದೆ.

ಕೊಕ್ಕಡ ಗಾಣಗಿರಿ ಸುಶೀಲ ಅವರ ಬ್ಯಾಂಕ್ ಖಾತೆಯಿಂದ ರೂ. 1.50 ಲಕ್ಷವನ್ನು ಅಪರಿಚಿತ ವ್ಯಕ್ತಿ ಎಗರಿಸಿದ್ದಾನೆ.

ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಎಟಿಎಂ ಗಾಗಿ ಅಪ್ಲಿಕೇಶನ್ ಹಾಕಿದ್ದು 3-4 ದಿನದ ಹಿಂದೆ ಎಟಿಎಂ ಕಾರ್ಡ್ ಬಂದಿತ್ತು. ಇಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲ ಅವರಿಗೆ ಫೋನ್ ಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಂಬಿಸಿ, ನಂತರ ಫೋನ್ ಮಾಡಿ ನಿಮಗೆ ಒಟಿಪಿ ಬಂದಿದೆ ನಂಬರ್ ಹೇಳಿ ಎಂದರು. ಅದರಂತೆ ಓಟಿಪಿ ನಂಬರ್ ಕೊಟ್ಟ ಸ್ವಲ್ಪ ಸಮಯದ ನಂತರ ಸುಶೀಲ ಅವರ ಖಾತೆಯಿಂದ ರೂ. 1.50 ಲಕ್ಷ ಡ್ರಾ ಆಗಿರುವುದು ಕಂಡು ಬಂದಿದೆ.

ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವಾರು ಗ್ರಾಹಕರು ಪದೇ ಪದೇ ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.ಈ ಬಗ್ಗೆ ಅಧಿಕಾರಿ ವರ್ಗದವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

- Advertisement -

Related news

error: Content is protected !!