Saturday, June 28, 2025
spot_imgspot_img
spot_imgspot_img

ಬೆಳ್ಳಾರೆ: ಸೋಷಿಯಲ್‌ ಮಿಡೀಯಾದಲ್ಲಿ ಯುವಕನಿಗೆ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು..!

- Advertisement -
- Advertisement -

ಬೆಳ್ಳಾರೆ: ಯುವಕನೋರ್ವರಿಗೆ Anita Singh ಎಂಬ ಹೆಸರಿನ ಟೆಲಿಗ್ರಾಂ ಐಡಿ ಲಿಂಕ್‌ ಕಳುಹಿಸಿ ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ ಲಕ್ಷಾಂತರ ರೂ. ಹಣವನ್ನು ಪಾವತಿಸಿಕೊಂಡು ವಂಚನೆ ಮಾಡಿರುವ ಘಟನೆ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿಲ್‌ಸಾದ್‌ ಎಸ್‌ (24) ಮೊಬೈಲ್‌ ನಲ್ಲಿ Instaram ಉಪಯೋಗಿಸುತ್ತಿದ್ದ ವೇಳೆ ಅದರಲ್ಲಿ Work of home without investment ಎಂದು ಲಿಂಕ್‌ ಇರುವ ವೀಡಿಯೋ ಬಂದಿದ್ದು ಆ ಲಿಂಕ್‌ ನ್ನು ಓಪನ್‌ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ, Anita Singh ಎಂಬ ಹೆಸರಿನ ಟೆಲಿಗ್ರಾಂ ಐಡಿ ಲಿಂಕ್‌ ಕಳುಹಿಸಿ ದಿಲ್‌ಸಾದ್‌‌ನ್ನು ಸೇರ್ಪಡೆಗೊಳಿಸಿರುತ್ತಾರೆ. ಬಳಿಕ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ Google Pay ಮುಖಾಂತರ ಹಂತ ಹಂತವಾಗಿ ಒಟ್ಟು ರೂ 274000/- ಹಣವನ್ನು ಪಾವತಿಸಿಕೊಂಡು ದಿಲ್‌ಸಾದ್‌ಗೆ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ : 64/2024, ಕಲಂ 318(4), 319(2) BNS ಮತ್ತು ಕಲಂ: 66(ಡಿ) ಐಟಿ ಆಕ್ಟ್ 2000 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!