Wednesday, June 17, 2026
spot_imgspot_img
spot_imgspot_img

ಬೆಳ್ಳಾರೆ: ತನ್ನ ಪುತ್ರಿಯ ವಿವಾಹದ ಸಂದರ್ಭದಲ್ಲೇ ಇಬ್ಬರು ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ ಉದ್ಯಮಿ..!

- Advertisement -
- Advertisement -
vtv vitla
vtv vitla

ಬೆಳ್ಳಾರೆ: ಪುತ್ರಿಯ ವಿವಾಹದ ಸಂದರ್ಭದಲ್ಲೇ ತನ್ನೂರಿನ ಇಬ್ಬರು ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚನ್ನೂ ಸಂಪೂರ್ಣ ವಾಗಿ ಭರಿಸುವ ಮೂಲಕ ಇಲ್ಲಿನ ಉದ್ಯಮಿಯೊಬ್ಬರು ಇತರರಿಗೂ ಮಾದರಿಯಾಗಿದ್ದಾರೆ.

vtv vitla
vtv vitla

ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚು ಭರಿಸಿದವರು ಬೆಳ್ಳಾರೆಯ ಪ್ರಗತಿ ಎಂಟರ್‌ ಪ್ರೈಸಸ್‌ ಮಾಲಕ ಅಬ್ದುಲ್‌ ಖಾದರ್‌ ಹಾಜಿ ಬಾಯಂಬಾಡಿ (ಅಬ್ಬಚ್ಚ). ತನ್ನಪುತ್ರಿ ಮಿಸ್ಬಾಳ ಮದುವೆ ದಿನವೇ ಸಾಮೂಹಿಕ ವಿವಾಹ ಏರ್ಪಡಿಸಿ ಬಡ ಹೆಣ್ಣು ಮಕ್ಕಳಿಬ್ಬರ ಮದುವೆ ನೆರವೇರಿಸಿದರು.

ಸಾಮೂಹಿಕ ವಿವಾಹ ಹಾಗೂ ಸಮ್ಮಾನ ಕಾರ್ಯಕ್ರಮದ ಉಸ್ತುವಾರಿಯನ್ನು ಬೆಳ್ಳಾರೆಯ ಶಂಸುಲ್‌ ಉಲಮಾ ಚಾರಿಟೆಬಲ್‌ ಟ್ರಸ್ಟ್‌ ಹಾಗೂ SKSSF ಬೆಳ್ಳಾರೆ ವಹಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಝೈನುಲ್‌ ಆಬಿದೀನ್‌ ತಂಙಳ್‌ ದುಗಲಡ್ಕ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.

- Advertisement -

Related news

error: Content is protected !!