Saturday, April 27, 2024
spot_imgspot_img
spot_imgspot_img

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಾಡಮನೆ ಅರಣ್ಯ ಪ್ರದೇಶದಲ್ಲಿ  ಭೂ ಕುಸಿತ.

- Advertisement -G L Acharya panikkar
- Advertisement -

ಸ್ಥಳೀಯರ ಪರಿಶೀಲನೆ ವೇಳೆ ಭಾರೀ ಭೂಕುಸಿತವಾಗಿರೋದು ಪತ್ತೆ.

ಮುನ್ನೆಚ್ಚೆರಿಕಾ ಕ್ರಮವಾಗಿ ಕಾಡಮನೆ ವ್ಯಾಪ್ತಿಯ ಜನ ಸ್ವತಃ ಸ್ಥಳಾಂತರ.

ಬೆಳ್ತಂಗಡಿ:-ಪಶ್ಚಿಮ ಘಟ್ಟದಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಭೂ ಕುಸಿತವಾಗಿದೆ.

ಮಿತ್ತಬಾಗಿಲು ಗ್ರಾಮದ ಕಾಡಮನೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಮಾರು 4 ಎಕರೆ ಪ್ರದೇಶದಲ್ಲಿ ಭೂಕುಸಿತವಾಗಿದೆ.ಅರಣ್ಯ ಪ್ರದೇಶದಲ್ಲಿ ಭೂಕುಸಿತವಾಗಿರೋದ್ರಿಂದ ಯಾರಿಗೂ ಅನಾಹುತವಾಗಿಲ್ಲ.
ಅರಣ್ಯದ ಕೆಳಭಾಗದಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಸತತವಾಗಿ ಮಳೆ ಸುರಿಯುವುದರಿಂದ ಈ ಅನಾಹುತ ವಾಗಿದೆ ಎಂದು ಹೇಳಲಾಗುತ್ತದೆ. ಹಾಗೂ ನೀರಿನ ಹರಿವು ಹೆಚ್ಚಳವಾದ ಹಿನ್ನಲೆ ಅರಣ್ಯದಲ್ಲಿ ಪರಿಶೀಲನೆ ನಡೆಸಿದ ಸ್ಥಳೀಯರು .

ಸ್ಥಳೀಯರ ಪರಿಶೀಲನೆ ವೇಳೆ ಭಾರೀ ಭೂಕುಸಿತವಾಗಿರೋದು ಪತ್ತೆಯಾಗಿದೆ.ಮುನ್ನೆಚ್ಚೆರಿಕಾ ಕ್ರಮವಾಗಿ ಕಾಡಮನೆ ವ್ಯಾಪ್ತಿಯ ಜನರನ್ನು ಸ್ವತಃ ಸ್ಥಳಾಂತರ ಮಾಡಲಾಗಿದೆ.ಕಳೆದ ವರ್ಷವೂ ಇದೇ ರೀತಿ ಅರಣ್ಯ ದಲ್ಲಿ ಭೂಕುಸಿತ ಆಗಿತ್ತು.

- Advertisement -

Related news

error: Content is protected !!