- Advertisement -
- Advertisement -
ಬೆಳ್ತಂಗಡಿ: ಉಜಿರೆಯ ಕಾಲೇಜೊಂದರ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ ಅಪರಿಚಿತರು ಲಕ್ಷಾಂತರ ರೂಪಾಯಿ ನಗದನ್ನು ಅಪಹರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ಕಾಲೇಜೊಂದರಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಪ್ರದೀಪ್ ಸುರೇಶ್ ರೂಗಿ ಎಂಬವವರ ಖಾತೆಯಲ್ಲಿದ್ದ 3.14 ಲಕ್ಷ ರೂ. ಹಣವನ್ನು ಅಪಹರಿಸಲಾಗಿದೆ.
ಮೇ 23 ರ ವರೆಗೆ ವಿದ್ಯಾರ್ಥಿ ಪ್ರದೀಪ್ ಅವರ ಖಾತೆಯಲ್ಲಿ ಹಣವಿತ್ತು. ಆ ಬಳಿಕ ಇವರ ಮೊಬೈಲ್ ಗೆ ಸಂದೇಶಗಳು ಬಂದಿದ್ದು, ಇದರಲ್ಲಿ ಒಟಿಪಿ ಬಂದಿದೆ. ಈ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು ಮರುದಿನ ಬೆಳಿಗ್ಗೆ ಖಾತೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಖಾತೆಯಲ್ಲಿದ್ದ 3,14,000 ರೂ. ವನ್ನು ಯಾವುದೋ ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -