Sunday, June 30, 2024
spot_imgspot_img
spot_imgspot_img

ಬೆಳ್ತಂಗಡಿ : ಬೈಕ್ ಗೆ ಯಮರೂಪಿ ಬಸ್‌ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು..! ರಕ್ಕಸ ‘ದುರ್ಗಾ ಬಸ್‌’ಗೆ ಇನ್ನೆಷ್ಟು ಬಲಿ ಬೇಕು; ಸಾರ್ವಜನಿಕರ ಆಕ್ರೋಶ..

- Advertisement -G L Acharya panikkar
- Advertisement -

ಬೆಳ್ತಂಗಡಿ: ದುರ್ಗಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ನಡ ಗ್ರಾಮ ಸಹಾಯಕ ಜಯರಾಜ್(48) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಲಾಯಿಲದ ಪುತ್ರಬೈಲಿನಲ್ಲಿ ನಡೆದಿದೆ.

ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಗ್ರಾಮ ಸಹಾಯಕ ಜಯರಾಜ್ ಸಾವನ್ನಪ್ಪಿದ್ದಾರೆ.

ಯಮರೂಪಿ ದುರ್ಗಾ ಬಸ್ ಈ ಹಿಂದೆ ಹಲವು ಅಪಘಾತ ನಡೆಸಿ ಅಮಾಯಕರು ಬಲಿ ಪಡೆದ ಇತಿಹಾಸ ಇದೆ. ಕಳೆದ ಕೆಲ ತಿಂಗಳ ಹಿಂದೆ ಮಂಜೊಟ್ಟಿಯಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಬಸ್ ನ ಟೈಮಿಂಗ್ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಬಸ್ ಮೇಲೆ ನಿಗಾ ವಹಿಸಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.

- Advertisement -

Related news

error: Content is protected !!