Monday, May 6, 2024
spot_imgspot_img
spot_imgspot_img

ಬೆಳ್ತಂಗಡಿ: ವಿವಾಹಿತ ಮಹಿಳೆ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ಮಹಿಳೆಯೋರ್ವಳು ತನ್ನ ಮಗಳನ್ನು ಕರೆದುಕೊಂಡು ಮನೆಯಿಂದ ಹೋದವಳು ಅತ್ತ ಮನೆಗೂ ಬಾರದೇ ಇತ್ತ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಮುಂಡಾಜೆ ಗ್ರಾಮದ ಅಗರಿ ಮನೆಯ ತೋಮಸ್‌ ಪಿ ಡಿ ಎಂಬವರ ಪತ್ನಿ ನೀನು ಒ ಎಸ್‌ (24) ಮತ್ತು ಅವರ ಮೂರು ವರ್ಷದ ಮಗಳು ಇವನಾ ಮರಿಯಾ ತೋಮಸ್‌ ನಾಪತ್ತೆಯಾಗಿರುವವರು.

ಜುಲೈ 4 ರಂದು ರಾತ್ರಿ ಗಂಡ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ನೀನು ಒ ಎಸ್‌ ಮತ್ತು ಅವರ ಮಗಳಾದ ಇವನಾ ಮರಿಯಾ ರವರು ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೋಗಿ ಕಾಣೆಯಾಗಿದ್ದಾರೆ.

ಹಾಗೆಯೆ ತಾಯಿ ಮತ್ತು ಮಗು ಕೇರಳ ರಾಜ್ಯದ ಅರುಣ್‌ ತಂಗಚ್ಚನ್‌ ಎಂಬವರ ಜೊತೆ ತೆರಳಿರಬಹುದು ಎನ್ನುವ ಅನುಮಾನವಿದ್ದು, ಕೂಡಲೇ ಪತ್ನಿ ಮತ್ತು ಮಗುವನ್ನು ಹುಡುಕಿ ಕೊಡುವಂತೆ ಪತಿ ತೋಮಸ್‌ ಪಿ.ಡಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!