Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸ್‌ ದಾಳಿ; ಇಬ್ಬರು ಅರೆಸ್ಟ್‌..!

- Advertisement -
- Advertisement -

ಬೆಳ್ತಂಗಡಿ: ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಫೆ.16ರಂದು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿ ನಡೆದಿದೆ.

ಆರೋಪಿಗಳನ್ನುಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಉಮ್ಮರಬ್ಬ(42) ಮತ್ತು ಪಡಂಗಡಿ ಗ್ರಾಮದ ಪರ್ಣಮಂಜ ನಿವಾಸಿ ಕರೀಂ(34) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿರುವ ಅನ್ವಾರ್ ಎಂಬಾತನಿಗೆ ಸೇರಿದ ಜಾಗದಲ್ಲಿ ಅನಧಿಕೃತ ಕಸಾಯಿಖಾನೆಯಲ್ಲಿ ಇಬ್ಬರು ಸೇರಿ ದನವನ್ನು ವಧೆ ಮಾಡುವಾಗ ಬೆಳ್ತಂಗಡಿ ಪೊಲೀಸರು ಫೆ.16 ರಂದು ಸಂಜೆ ದಾಳಿ ಮಾಡಿದ್ದು. ಸ್ಥಳದಲ್ಲಿ ಸುಮಾರು 85 ಕೆ.ಜಿ ದನ ಮಾಂಸ, ಕತ್ತಿ, ಒಂದು ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ರವಿ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಇನ್ಸೆಕ್ಟರ್ ಸುಬ್ಬಪುರ್ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಯಲ್ಲಪ್ಪ.ಹೆಚ್‌.ಎಮ್ ನೇತೃತ್ವದ ಸಿಬ್ಬಂದಿ ಬೆನ್ನಚ್ಚನ್, ಪ್ರಮೋದ್ ನಾಯ್ಕ, ವಿಶ್ವನಾಥ್ ನಾಯ್, ಜಗದೀಶ್ ಅತ್ತಾಜೆ, ಚರಣ್ ರಾಜ್, ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!