- Advertisement -
- Advertisement -
ಬೆಳ್ತಂಗಡಿ : ಜಾನುವಾರುಗಳನ್ನು ಅಕ್ರಮವಾಗಿ ಈಚರ್ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಭಜರಂಗದಳದ ಕಾರ್ಯಕರ್ತರು ದನದೊಂದಿಗೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ತಡರಾತ್ರಿ ಉಜಿರೆ – ಧರ್ಮಸ್ಥಳ ರಸ್ತೆಯ ನೇತ್ರಾವತಿ ಬಳಿ ನಡೆದಿದೆ.
ಲಾರಿಯಲ್ಲಿ ಒಟ್ಟು 9 ದನಗಳಿದ್ದವು ಎನ್ನಲಾಗಿದ್ದು ಭಜರಂಗದಳದ ಕಾರ್ಯಕರ್ತರು ಲಾರಿಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಎಸ್. ಐ ನಂದಕುಮಾರ್ ಹಾಗೂ ಧರ್ಮಸ್ಥಳ ಎಸ್. ಐ. ಪವನ್ ಕುಮಾರ್ ಧಾವಿಸಿ ಅಕ್ರಮ ಗೋ ಸಾಗಾಟಗಾರರನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -