Saturday, April 27, 2024
spot_imgspot_img
spot_imgspot_img

ಯಾರಿಗೂ ಐಡಿ ಕಾರ್ಡ್ ಕೊಟ್ಟಿಲ್ಲ: ಸರಿಯಾಗಿ ತಪಾಸಣೆ ಮಾಡುವಂತೆ ಕಮಿಷನರ್ ಸೂಚನೆ

- Advertisement -G L Acharya panikkar
- Advertisement -

ಬೆಂಗಳೂರು: ಏಳು ದಿನಗಳ ಲಾಕ್ ಡೌನ್ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೆಲ ಕಂಟ್ರೋಲ್ ರೂಮ್ ಮೂಲಕ ಸೂಚನೆಗಳನ್ನು ಕೊಟ್ಟಿದ್ದಾರೆ.
ಕಮಿಷನರ್ ಪೊಲೀಸ್ ಸಿಬ್ಬಂದಿಗೆ ನೀಡಿದ ಸೂಚನೆಗಳು
.

*ಈ ಬಾರಿ ಯಾರಿಗೂ ಐಡಿ ಕಾರ್ಡ್ ಕೊಟ್ಟಿಲ್ಲ. ಹೀಗಾಗಿ ಬ್ಯಾರಿಕೇಡ್ ಬಳಿ ಸರಿಯಾಗಿ ತಪಾಸಣೆ ಮಾಡಿ ಬಿಡಬೇಕು.

*ಜನರ ಜತೆ ಸಂಯಮದಿಂದ ನಡೆದುಕೊಳ್ಳಬೇಕು. ಅವಾಚ್ಯ ಶಬ್ಧ ಬಳಸಬೇಡಿ.

*ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ತನಕ ಅಂಗಡಿಗಳು ತೆರೆದಿರುತ್ತದೆ. ಅದಾದ ಬಳಿಕ ಮತ್ತೆ ತೆರೆಯದಂತೆ ನೋಡಿಕೊಳ್ಳಬೇಕು.

*ಆ ಬಳಿಕ ಮೆಡಿಕಲ್ ಸಂಬಂಧಪಟ್ಟವು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಬೇಕು.

*ಸಿಬ್ಬಂದಿ ಕೊರತೆ ಹಿನ್ನಲೆ ಪಾಲಿಂಟಿಯರ್ಸ್ ಸೇವೆಗೆ ಬರಲಿದ್ದಾರೆ. ಹೀಗಾಗಿ ಅವರಿಗೆ ಸರಿಯಾಗಿ ಮಾಹಿತಿ ನೀಡಿ.

*ಸ್ವಯಂ ಸೇವಕರಿಗೆ ಜಾಕೆಟ್, ಕ್ಯಾಪ್ ವಿತರಣೆ ಮಾಡಿ. ಯಾವುದೇ ಬೇಜಾವಬ್ದಾರಿ ಬೇಡ.

*ಎಲೆಕ್ಟ್ರಾನಿಕ್ ಮೀಡಿಯಾ, ಫೋಟೋ ಜನರ್ಲಿಸ್ಟ್, ಪತ್ರಿಕೆ ವಿತರಕರ ಐಡಿ ಕಾರ್ಡ್ ಇದ್ದರೆ ಸಾಕು ಪಾಸ್ ಬೇಕಿಲ್ಲ. ಯಾರ ಜತೆಯೂ ಜಗಳ ಆಡಬೇಡಿ.

*ಬ್ಯಾರಿಕೇಡ್ ಬಳಿ, ಕಂಪ್ಯೂಟರ್ ಆಪರೇಟಿಂಗ್, ಬಂದೋಬಸ್ತ್ಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಬಹುದು. ಸ್ವಯಂ ಸೇವಕರನ್ನು ಕಂಟೈನ್ಮೆಂಟ್ ಝೋನ್ಗೆ ಕರೆದುಕೊಂಡು ಹೋಗಬಾರದು.

*ಹಣ್ಣು, ಹಂಪಲು , ತರಕಾರಿ ಮಾರಾಟ ಮಾಡುವವರಿಗೆ ಪಾಸ್ ಬೇಡ. ಆದ್ರೆ ಅನವಶ್ಯಕವಾಗಿ ಓಡಾಡೋದಕ್ಕೆ ಬಿಡಬಾರದು.

- Advertisement -

Related news

error: Content is protected !!