Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಬೆಂಕಿ ಅವಘಡ – 6 ಹಸುಗಳು ಸಹಿತ ವಾಹನಗಳೂ ಭಸ್ಮ

- Advertisement -
- Advertisement -

ಬೆಂಗಳೂರು: ನಗರದ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 6 ಹಸುಗಳು ಸಾವನ್ನಪ್ಪಿದ್ದು, ಹಲವು ಜಾನುವಾರುಗಳು ಗಾಯಗೊಂಡಿವೆ.

ರಾತ್ರಿ 1:45ರ ಸುಮಾರಿಗೆ ಹಸುಗಳ ಶೆಡ್ ಪಕ್ಕದಲ್ಲಿದ್ದ ಫ್ಲೈವುಡ್ ಅಂಗಡಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಶೆಡ್‌ಗೂ ವ್ಯಾಪಿಸಿದೆ. ಶೆಡ್‌ನಲ್ಲಿ ಒಟ್ಟು 20 ಹಸುಗಳಿದ್ದು, ಅವುಗಳಲ್ಲಿ 6 ಹಸುಗಳು ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿವೆ. ಇನ್ನೂ 3 ಹಸುಗಳು ಸುಟ್ಟ ಗಾಯಗಳಿಂದ ನರಳುತ್ತಿವೆ. ಹಸುಗಳ ಕೂಗಾಟ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ 14 ಹಸುಗಳನ್ನು ರಕ್ಷಣೆ ಮಾಡಿದರು. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿಯ ತೀವ್ರತೆಗೆ ಒಂದು ಟಾಟಾ ಏಸ್ ವಾಹನ, ನಾಲ್ಕು ಬೈಕ್‌ಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಹಸುಗಳು ಶ್ರೀನಿವಾಸ್ ಎಂಬವರದ್ದಾಗಿದ್ದು, ಅವರು ಕಳೆದ 20 ವರ್ಷಗಳಿಂದ ಹಸು ಸಾಕಣೆ ಮಾಡುತ್ತಿದ್ದರು.

ಘಟನೆಯ ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!