Sunday, July 19, 2026
spot_imgspot_img
spot_imgspot_img

ಬೆಂಗಳೂರು: ಮೇಜ‌ರ್ ಸ್ವಾತಿ ಶಾಂತಕುಮಾರ್‌ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ!

- Advertisement -
- Advertisement -

ಬೆಂಗಳೂರು : ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರನ್ನು ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ-2025’ಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಪ್ರಕಟಿಸಿದ್ದಾರೆ.ರವಿವಾರ ಈ ಸಂಬಂಧ ಅಧಿಕೃತವಾಗಿ ಪ್ರಶಸ್ತಿ ಪ್ರಕಟಿಸಿರುವ ಅವರು, ದೇಶದ ವಿವಿಧೆಡೆ ಅತ್ಯುತ್ತಮ ಕಾರ್ಯಾಚರಣೆ ಮತ್ತು ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳನ್ನು ಗುರುತಿಸಿ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ, ಸ್ವಾತಿ ಶಾಂತಕುಮಾ‌ರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸ್ವಾತಿ ಶಾಂತಕುಮಾ‌ರ್ ಅವರು ಯುದ್ಧ ಪೀಡಿತ ದಕ್ಷಿಣ ಸುಡಾನ್‌ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗಾಗಿ ನಡೆಸಿದ ಕಾರ್ಯಕ್ರಮಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಮಾನ ಪಾಲುದಾರಿಕೆ-ಶಾಶ್ವತ ಶಾಂತಿ’ ಎಂಬುದು ಸ್ವಾತಿ ಅವರ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ.ಈ ಪ್ರಶಸ್ತಿಗೆ ಶಾಂತಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿರುವವರ ಹೆಸರುಗಳ ಪಟ್ಟಿ ಮಾಡಲಾಗಿತ್ತು. ಹಲವಾರು ಹೆಸರುಗಳನ್ನು ನಾಮನಿರ್ದೇಶನವನ್ನು ಮಾಡಲಾಗಿತ್ತು. ಆ ಪೈಕಿ, ಅಂತಿಮ ಪಟ್ಟಿಗೆ ನಾಲ್ವರನ್ನು ಆಯ್ಕೆ ಮಾಡಿದ್ದು, ನಾಲ್ವರಲ್ಲಿ ಯಾರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಮತದಾನ ನಡೆದಿತ್ತು. ಅತ್ಯಧಿಕ ಮತಗಳು ಸ್ವಾತಿ ಅವರಿಗೆ ಬಂದಿದ್ದು, ಅಂತಿಮವಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿವೆ.

- Advertisement -

Related news

error: Content is protected !!