Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಬ್ಲಾಸ್ಟ್‌ ಆಗಿ ವ್ಯಕ್ತಿ ಮೃತ್ಯು..!

- Advertisement -
- Advertisement -

ಬೆಂಗಳೂರು: ಎಲೆಕ್ಟ್ರಿಕಲ್‌ ಬೈಕ್‌ ಬ್ಯಾಟರಿ ಬ್ಲಾಸ್ಟ್‌ ಆಗಿ ವ್ಯಕ್ತಿ ಮೃತಪಟ್ಟಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ನಡೆದಿದೆ.

ಲೂಥ್‌ ನಾಥನ್‌(62) ಮೃತ ವ್ಯಕ್ತಿ. ಮನೆಯಲ್ಲಿ ರಾತ್ರಿ ಬೈಕನ್ನು ಚಾರ್ಜ್‌ಗೆ ಹಾಕಿ, ವ್ಯಕ್ತಿ ಹಾಲ್‌ನಲ್ಲಿ ಮಲಗಿದ್ದ ವೇಳೆ ಬ್ಯಾಟರಿ ಸ್ಫೋಟಗೊಂಡು ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಘಟನೆ ದಿನ ಮನೆಯ ಗ್ರೌಂಡ್ ಫ್ಲೋರ್‌ನಲ್ಲಿ ಒಬ್ಬರೇ ಮಲಗಿದ್ದರು. ಫಸ್ಟ್ ಫ್ಲೋರ್‌ನಲ್ಲಿ ಮಕ್ಕಳು‌ ವಾಸವಾಗಿದ್ದರು. ಮುಂಜಾನೆ 3:15 ರ ವೇಳೆ ಬ್ಯಾಟರಿ ಬ್ಲಾಸ್ಟ್ ಆಗಿದೆ.

ಎಲೆಕ್ಟ್ರಿಕ್ ಬೈಕನ್ನು ಚಾರ್ಜ್‌ಗೆ ಹಾಕಿ ಲೂಥ್‌ ನಾಥನ್ ಪಕ್ಕದಲ್ಲೇ ಮಲಗಿದ್ದರು. ಬ್ಲಾಸ್ಟ್ ಆಗಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬ್ಯಾಟರಿ ಬ್ಲಾಸ್ಟ್ ಆದ ನಂತರ ಮನೆ ಸಂಪೂರ್ಣ ಹೊತ್ತಿ ಉರಿದಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!