Tuesday, July 28, 2026
spot_imgspot_img
spot_imgspot_img

ಬೆಂಗಳೂರು: ಹೊತ್ತಿ ಉರಿದ ಖಾಸಗಿ ಬಸ್; ಪ್ರಯಾಣಿಕರು ಅಪಾಯದಿಂದ ಪಾರು

- Advertisement -
- Advertisement -

ಬೆಂಗಳೂರು: ಚಂದ್ರ ಲೇಔಟ್ ಪ್ರದೇಶದ ಬಿಎಂಟಿಸಿ ಡಿಪೋ ಬಳಿ ನಿಂತಿದ್ದ ಹೊಸ ಖಾಸಗಿ ಬಸ್ ಗೆ ಹಠಾತ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇಂದು ಬೆಳಗ್ಗೆ 10.20ರ ಸುಮಾರಿಗೆ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ. ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಬೆಂಕಿಯ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬೆಂಕಿ ತೀವ್ರವಾಗಿ ಹರಡಿದ ಕಾರಣ, ಬಸ್ ಸಂಪೂರ್ಣವಾಗಿ ಭಸ್ಮವಾಗಿದ್ದು, ಬೆಂಕಿಗೆ ಶಾರ್ಟ್ ಸರ್ಕ್ಯೂಟ್, ಎಂಜಿನ್ ಸಮಸ್ಯೆ, ಇಂಧನ ಸೋರಿಕೆ ಅಥವಾ ಇತರ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Related news

error: Content is protected !!