Sunday, June 14, 2026
spot_imgspot_img
spot_imgspot_img

ಬೆಂಗಳೂರು: ಬಿಗ್‌ ಬಾಸ್‌ ಮನೆಗೆ ಗಾಯಕ ಹನುಮಂತ ವೈಲ್ಡ್ ಕಾರ್ಡ್‌ ಎಂಟ್ರಿ

- Advertisement -
- Advertisement -

ಬೆಂಗಳೂರು: ಬಿಗ್‌ ಬಾಸ್‌ ರಿಯಾಲಿಟಿ ಶೋ ಗೆ ವೈಲ್ಡ್ ಕಾರ್ಡ್‌ ಎಂಟ್ರಿಯಾಗಿ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿನ ಜಗಳದಿಂದಾಗಿ ವಾರದ ಮಧ್ಯೆಯೇ ಸ್ಪರ್ಧಿಗಳಾದ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ಬಂದಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಮತ್ತೊಬ್ಬರು ಹೊರ ಹೋಗುವುದು ಅನುಮಾನವಾಗಿದೆ. ಹಂಸ ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು. ಎರಡನೇ ವಾರ ಶಿಶಿರ್ ಮನೆಯ ಕ್ಯಾಪ್ಟನ್ ಆಗಿದ್ದರು. ಇದೀಗ ಮೂರನೇ ವಾರ ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಯನ್ನೇ ಕ್ಯಾಪ್ಟನ್ ಎಂದು ಬಿಗ್‌ಬಾಸ್ ಘೋಷಣೆ ಮಾಡಿದ್ದರು. ಈ ಘೋಷಣೆಯಿಂದ ಮನೆಯಲ್ಲಿನ ಎಲ್ಲಾ ಸದಸ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ.

ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿರುವ ಹನುಮಂತ ಅಂದರೆ ಕರುನಾಡಿನ ಜನತೆಗೆ ಅಚ್ಚುಮೆಚ್ಚು. ಸಿಂಗಿಂಗ್ ಜೊತೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿರುವ ಹನುಮಂತ ತಮ್ಮ ಗ್ರಾಮೀಣ ಭಾಷೆಯ ಮೂಲಕವೇ ಎಲ್ಲರನ್ನು ಸೆಳೆಯುತ್ತಾರೆ. ಇದೀಗ ಬಿಗ್‌ಬಾಸ್ ವೇದಿಕೆಗೆ ಬಂದಿರುವ ಹನುಮಂತ ಮನೆಯಲ್ಲಿ ಹೇಗೆ ಇರ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

- Advertisement -

Related news

error: Content is protected !!