




ಬೆರಿಪದವು: ಕುಳೂರು ಸದಾಶಿವ ಶೆಟ್ಟಿ ಸೇವಾ ಅಭಿಮಾನಿ ಬಳಗ ಬೆರಿಪದವು ಬಾಯಾರು ವತಿಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಾಯಾರು ಗ್ರಾಮದ ಓಟೆಪಡ್ಪು ನಿವಾಸಿ ಕೃಷ್ಣ ನಾಯ್ಕರವರಿಗೆ ಸಹಾಯ ಧನ ಹಾಸ್ತಾಂತರಿಸಲಾಯಿತು.

ಕೂಲಿ ಕಾರ್ಮಿಕರಾಗಿ ಮರದ ಕೆಲಸ ಮಾಡುತ್ತಾ ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳೊಂದಿಗೆ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕೃಷ್ಣ ನಾಯ್ಕರವರ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದಿದ್ದು, ವೈದ್ಯಕೀಯ ತಪಾಸಣೆಯ ವೇಳೆ ಬ್ರೈನ್ ಟ್ಯೂಮರ್ ಕಾಯಿಲೆ ಇರುವುದಾಗಿ ತಿಳಿದುಬಂದಿದೆ. ಇದೀಗ ಆರೋಗ್ಯ ತೀವ್ರ ಹದಗೆಟ್ಟಿದ್ದು, ಎದ್ದೇಳಲಾಗದ ಸ್ಥಿತಿ ಎದುರಾಗಿದೆ. ಈ ಕುಟುಂಬವು ಸಹಾಯದ ನಿರೀಕ್ಷೆ ಯಲ್ಲಿದ್ದು, ಸಮಾಜ ಬಾಂಧವರು ಸಹಕರಿಸುವಂತೆ ಮನವಿ.

ತೀರಾ ಬಡತನದಲ್ಲಿ ಬಳಲುತಿದ್ದ ಈ ಕುಟುಂಬಕ್ಕೆ ಕುಳೂರು ಸದಾಶಿವ ಶೆಟ್ಟಿ ಸೇವಾ ಅಭಿಮಾನಿ ಬಳಗ ಬೆರಿಪದವು ವತಿಯಿಂದ ಶ್ರೀದೇವಿ ಸೇವಾ ಸಮಿತಿ ಬೆರಿಪದವು ಹಾಗೂ ನೇಸರ ಫ್ರೆಂಡ್ಸ್ ಓಟೆಪಡ್ಪು ಸಹಕಾರದಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರಾಘವ ಮಾಸ್ಟರ್ ಬೆರಿಪದವು,ಶಿವಪ್ರಸಾದ್ ಆಳ್ವ, ಕೃಷ್ಣ ಮೂರ್ತಿ ಶಾಂತಿಮೂಲೆ, ದೇವದಾಸ್ ಬೆರಿಪದವು, ಶಿವ ಪೆರುವೋಡಿ, ಅಶೋಕ್ ಕೊಜಪ್ಪೆ ನೇಸರ ಫ್ರಂಡ್ಸ್ ಓಟೆಪಡ್ಪು ಹಾಗೂ ಶ್ರೀದೇವಿ ಸೇವಾ ಸಮಿತಿ ಬೆರಿಪದವು ಇದರ ಸದಸ್ಯರು ಉಪಸ್ಥಿತರಿದ್ದರು.
ಕುಳೂರು ಸದಾಶಿವ ಶೆಟ್ಟಿ ಸೇವಾ ಅಭಿಮಾನಿ ಬಳಗ ಬೆರಿಪದವು ತಂಡವು ಸಹಾಯ ಹಸ್ತವನ್ನು ನೀಡುವುದರ ಮೂಲಕ ಹಲವಾರು ಬಡವರ ಬಾಳಿಗೆ ಬೆಳಕಾಗಿ ನಿಂತಿದೆ. ಹಲವು ಬಡವರಿಗೆ ಸೂರು ನಿರ್ಮಾಣ, ಆರ್ಥಿಕ ಸಹಾಯವನ್ನು ಮಾಡುವುದರ ಮೂಲಕ ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ಗುರುತಿಸಿಕೊಂಡಿದೆ.








