ಮಂಗಳೂರು: ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ಅನುದಾನದಡಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಬಂಗ್ರಕೂಳೂರು 16 ನೇ ವಾರ್ಡ್ ಪಡ್ಡೋಡಿ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲು ಶಾಸಕರಾದ ಡಾ.ವೈ ಭರತ್ ಶೆಟ್ಟಿ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಮುಂದಿನ ದಿನಗಳಲ್ಲಿ ನಾಲ್ಕು ಕೋಟಿ ಅನುದಾನದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತುರ್ತಾಗಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಶಾಸಕರೊಂದಿಗೆ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಮುಖಂಡರಾದ ಉಮೇಶ್ ಮಲರಾಯ ಸಾನ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಕುಲಾಲ್, ಕಿರಣ್ ಕೋಟ್ಯಾನ್, ರಾಜೇಶ್ ಸಂಕದಮನೆ, ರಮೇಶ್ ಶೆಟ್ಟಿ, ಚಂದ್ರಿಕಾ ಪ್ರಭಾಕರ್, ವಾಣಿ ಭಂಡಾರಿ, ಗಂಗಾಧರ ಕಿರೋಡಿಯನ್, ರಘುಪಾತ್ರಿ, ಜಯಾನಂದ ಅಮೀನ್, ಯಶವಂತ ದೊಡ್ಡಮನೆ, ಉಮೇಶ್ ಪದ್ದೋಡಿ, ಬಿ.ಕೆ ರಾಮ, ಉಮೇಶ್ ಅಮೀನ್, ವೆಂಕಪ್ಪ ದೊಡ್ಡಮನೆ, ಸುರೇಶ್ ಭಂಡಾರಿ, ಸುಧೀರ್ ಭಂಡಾರಿ, ನವನೀತ್ ಕೋಟಿಯಾನ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

