Thursday, June 18, 2026
spot_imgspot_img
spot_imgspot_img

ಸೂರಜ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್! ಪರಮಾಪ್ತನಿಂದಲೇ ಸೂರಜ್ ಗೆ ಸಂಕಷ್ಟ…

- Advertisement -
- Advertisement -

ಸೂರಜ್ ರೇವಣ್ಣ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ, ಬೆಂಬಲಕ್ಕೆ ನಿಂತು, ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದ ಸೂರಜ್ ರೇವಣ್ಣ ಆಪ್ತನೇ ಇದೀಗ ತಿರುಗಿ ಬಿದ್ದಿದ್ದಾನೆ. ನನ್ನ ಮೇಲೂ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಅಂತ ಆರೋಪಿಸಿದ್ದಾನೆ. ಅಲ್ಲದೇ ಜೀವ ಬೆದರಿಕೆ ಆರೋಪವನ್ನೂ ಕೂಡ ಸೂರಜ್ ರೇವಣ್ಣ ಆಪ್ತ ಮಾಡಿದ್ದಾನೆ.

ಜೂ.21 ರಂದು ಡಾ.ಸೂರಜ್‌ ಪರವಾಗಿ ದೂರು ಕೊಟ್ಟಿದ್ದ ಸೂರಜ್ ರೇವಣ್ಣ ಆಪ್ತ ಅಂತಾನೇ ಹೇಳಲಾದ ಹೊಳೆನರಸೀಪುರ ಮೂಲದ ಯುವಕನೇ ಈಗ ಸೂರಜ್‌ ವಿರುದ್ಧವಾಗಿ ದೂರು ನೀಡಿದ್ದಾನೆ ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್‌ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಎಫ್‌ಐಆರ್‌ ದಾಖಲಾಗಿದೆ.

ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಎರಡನೇ ಕೇಸ್ ದಾಖಲಾಗಿದೆ. ಮೂರು ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ ದೂರು ನೀಡಿದ್ದಾನೆ

- Advertisement -

Related news

error: Content is protected !!