Sunday, October 6, 2024
spot_imgspot_img
spot_imgspot_img

ಬಿಗ್‌ ಬಾಸ್‌ ಕನ್ನಡ 11 ಶುರು: ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ ನೋಡಿ

- Advertisement -
- Advertisement -

ಬಿಗ್‌ ಬಾಸ್‌ ಕನ್ನಡ ಸೀಸನ್ 11 ನಿನ್ನೆ ಆರಂಭವಾಗಿದ್ದು, ದೊಡ್ಮನೆ ಒಳಗೆ ಸ್ಪರ್ಧಿಗಳು ಎಂಟ್ರಿ ಆಗಿದ್ದು, ಈ ಬಾರಿ ಯಾರೆಲ್ಲ ದೊಡ್ಮನೆಗೆ ಹೋಗ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ

ಈ ರಿಯಾಲಿಟಿ ಶೋ ನಿರೂಪಕರಾಗಿ ಕಿಚ್ಚ ಸುದೀಪ್​ ಸರ್ಧಾಳುಗಳನ್ನು ದೊಡ್ಮನೆಗೆ ಸ್ವಾಗತ ಮಾಡಿದ್ದಾರೆ. ಸ್ಪರ್ಧಿಗಳ ವಿವರ ಇಲ್ಲಿದೆ.

ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ ‘ಗೀತಾ’ ಸೀರಿಯಲ್​ ಮೂಲಕ ಖ್ಯಾತರಾದ ನಟಿ ಭವ್ಯಾ, ಎರಡನೇಯವರಾಗಿ ನಟಿ ಯಮುನಾ ಶ್ರೀನಿಧಿ, ಮೂರನೇ ಕಂಟೆಸ್ಟಂಟ್​ ಆಗಿ ಮಂಗಳೂರು ಮೂಲದ ಯುಟ್ಯೂಬರ್​ ಧನರಾಜ್​, ನಾಲ್ಕನೇ ಸ್ಪರ್ಧಾಳುವಾಗಿ ‘ಸತ್ಯ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ ನಟಿ ಗೌತಮಿ ಜಾಧವ್ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ.

ನಂತರ ನಟಿ ಅನುಷಾ, ‘ನವಗ್ರಹ’ ಖ್ಯಾತಿಯ ನಟ ಧರ್ಮ ಕೀರ್ತಿರಾಜ್‌, 7ನೇ ಸ್ಪರ್ಧಿಯಾಗಿ ವಕೀಲ ಜಗದೀಶ್, ಆ ಬಳಿಕ ಧಾರವಾಹಿ ನಟ ಶಿಶಿರ್, ‘ಪದ್ಮಾವತಿ’ ಧಾರಾವಾಹಿ ನಟ ತ್ರಿವಿಕ್ರಮ್ ಬಿಗ್ ಬಾಸ್​ಗೆ 9ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ಹಂಸಾ 10ನೇ ಸ್ಪರ್ಧಿಯಾಗಿ ಬಿಗ್​ ಮನೆಗೆ ಎಂಟ್ರಿ ಕೊಟ್ಟರು.

ಬಿಗ್‌ ಬಾಸ್‌‌‌ ಸೀಸನ್‌‌ 10ರಲ್ಲಿ ಸ್ಪರ್ಧಿಯಾಗಿ ಮಿಂಚಿದ್ದ ಕಾಮಿಡಿ ನಟ ತುಕಾಲಿ ಸಂತೋಷ್‌‌ ಅವರ ಪತ್ನಿ ಮಾನಸ ಕೂಡ ಈ ಬಾರಿಯ ಬಿಗ್‌ ಬಾಸ್‌ಗೆ 11ನೆಯವರಾಗಿ ಆಗಮಿಸಿದ್ದಾರೆ. 12ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಬಿಗ್​ಬಾಸ್​ 11ನೇ ಆವೃತ್ತಿಗೆ ಸೇರ್ಪಡೆಗೊಂಡಿದ್ದಾರೆ.

ಆ ಬಳಿಕ ಧಾರಾವಾಹಿ ನಟಿ ಐಶ್ವರ್ಯ ಸಿಂಧೋಗಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ, ನಟ ಮಂಜು ಹಾಗೂ ‘ಪಾರು’ ಧಾರವಾಹಿ ಖ್ಯಾತಿಯ ನಟಿ ಮೋಕ್ಷಿಕಾ 16ನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿದ್ದಾರೆ.

- Advertisement -

Related news

error: Content is protected !!