Tuesday, July 8, 2025
spot_imgspot_img
spot_imgspot_img

“ಹಕ್ಕಿ ಜ್ವರ ಹಿನ್ನೆಲೆ ಕೋಳಿ ಮಾರಾಟದ ಮೇಲೆ ನಿರ್ಬಂಧ ವಿಧಿಸಬೇಡಿ”- ಕೇಂದ್ರ ಸರ್ಕಾರ

- Advertisement -
- Advertisement -

ನವದೆಹಲಿ: ಹಕ್ಕಿ ಜ್ವರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಮುಂಜಾಗ್ರತೆ ಕ್ರಮ ವಹಿಸಿಕೊಳ್ಳಬೇಕು. ಇದೇ ವೇಳೆ ಇದರ ಹೆಸರಿನಲ್ಲಿ ಕೋಳಿ ಮಾರಾಟದ ಮೇಲೆ ನಿರ್ಬಂಧ ವಿಧಿಸಬೇಡಿ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ದೇಶದ 11 ರಾಜ್ಯಗಳಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿದೆ. ಇದು ಪತ್ತೆ ಹಚ್ಚಲಾದ ಪ್ರದೇಶಗಳಲ್ಲಿ ಕೋಳಿ ಮಾರಾಟ ಮಾಡಬೇಡಿ. ಅದೇ ರೀತಿ ಇತರ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಬೇಡಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ದೇಶದಲ್ಲಿ ಹಕ್ಕಿ ಜ್ವರ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ.

- Advertisement -

Related news

error: Content is protected !!