Tuesday, October 20, 2026
spot_imgspot_img
spot_imgspot_img

ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಪಕ್ಷಿ ಡಿಕ್ಕಿ-ತಪ್ಪಿದ ದುರಂತ

- Advertisement -
- Advertisement -

ಬೆಂಗಳೂರು: ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಸೋಮವಾರ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿದ್ದ 148 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಘಟನೆ ನಡೆದಿದ್ದರೂ ವಿಮಾನವು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ. ಭೂಸ್ಪರ್ಶದ ನಂತರ ಅದನ್ನು ಪಾರ್ಕಿಂಗ್ ಸ್ಟ್ಯಾಂಡ್‌ಗೆ ಸ್ಥಳಾಂತರಿಸಲಾಯಿತು. ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಕೂಡ ಇಂತಹದ್ದೇ ಅವಘಡ ಸಂಭವಿಸಿ, ದುಬೈನಿಂದ ಆಗಮಿಸಿದ ಎಮಿರೇಟ್ಸ್ ವಿಮಾನವೊಂದು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪಕ್ಷಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆ ವಿಮಾನದ ಹಾರಾಟದಲ್ಲಿ ವಿಳಂಬ ಉಂಟಾಗಿತ್ತು.

ಮಧ್ಯಾಹ್ನ 3:10ರ ಸುಮಾರಿಗೆ, ಟರ್ಮಿನಲ್ 3ರ ಸಮೀಪವಿರುವ ರನ್‌ವೇ ಮೇಲೆ ವಿಮಾನವು ಇಳಿಯುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ .

- Advertisement -

Related news

error: Content is protected !!