Friday, May 3, 2024
spot_imgspot_img
spot_imgspot_img

ಕ್ಷಮಾ ಭಿಕ್ಷೆ ಕೇಳಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯವೆಂದ ಯುಟಿ ಖಾದರ್‌; ಇಂದಿರಾಗಾಂಧಿಯವರ ಪತ್ರದ ಫೋಟೋದೊಂದಿಗೆ ಬಿಜೆಪಿ ತಿರುಗೇಟು

- Advertisement -G L Acharya panikkar
- Advertisement -

ಸಾವರ್ಕರ್ ಕ್ಷಮಾಪಣೆಯ ಭಿಕ್ಷೆ ಬೇಡಿದ್ದರಿಂದ ಬ್ರಿಟಿಷರು ಕ್ಷಮೆ ನೀಡಿ ಬಿಡುಗಡೆ ಮಾಡಿದ್ದಾರೆ. ಬಳಿಕ ಪಿಂಚಣಿಗಾಗಿ ಬ್ರಿಟಿಷರ ಕಛೇರಿಗೆ ಸಾವರ್ಕರ್ ಅಲೆದಾಡಿದ್ದರು. ಬಿಡುಗಡೆಯಾದ ಬಳಿಕ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ ಉದಾಹರಣೆ ಇದ್ದರೆ ತೋರಿಸಿ. ಎಂದು ಮಾಜಿ ಸಚಿವ ಯುಟಿ ಖಾದರ್ ಸವಾಲೆಸೆದಿದ್ದಾರೆ.

ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಹೊರ ಬಂದ ಸಾವರ್ಕರ್ 1924 ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ? ಈ ಬಗ್ಗೆ ದಾಖಲೆ ಇದ್ದರೆ ಕೊಡಿ, ಪಿಂಚಣಿಗಾಗಿ ಬ್ರಿಟೀಷ್ ಕಚೇರಿಗೆ ಸಾವರ್ಕರ್ ಅಲೆದಾಡಿದ್ದಾರೆ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಯಾರು? ಅಂಡಮಾನಿನ ಜೈಲಿನಲ್ಲಿ ಬ್ರಿಟೀಷರಿಂದ ಬಲಿಯಾದವರಾ? ಅಥವಾ ಬ್ರಿಟಿಷರಿಗೆ ಕ್ಷಮಾಪಣೆ ಪತ್ ಬರೆದು ಬಿಡುಗಡೆಯಾದವರಾ? ಈ ಬಗ್ಗೆ ಬಿಜೆಪಿಯವರು ಉತ್ತರಿಸಬೇಕು ಎಂದು ಖಾದರ್ ಸವಾಲೆಸಿದಿದ್ದರು.

ಇದಕ್ಕೆ ಸಂಬಂಧಿಸಿ ಬಿಜೆಪಿ ದಕ್ಷಿಣ ಕನ್ನಡ ತಿರುಗೇಟು ನೀಡಿದೆ. ಬಿಜೆಪಿ ದಕ್ಷಿಣ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ತಿರುಗೇಟು ನೀಡಿದ್ದಾರೆ. ಇಂದಿರಾ ಗಾಂಧಿಯವರು ಬರೆದಿರುವ ಪತ್ರದಲ್ಲಿ ವೀರ ಸಾವರ್ಕರ್‍ ಅವರು ಸ್ವಾತಂತ್ರ್ಯ ಹೋರಾಟಗಾರರು. ಭಾರತದ ಈ ಹೆಮ್ಮೆಯ ಪುತ್ರನ ಜನ್ಮ ಶತಮಾನೋತ್ಸವ ಆಚರಣೆ ಯಶಸ್ವಿಯಾಗಬೇಕೆಂದು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಅದರೊಂದಿಗೆ ಈ ಪೋಸ್ಟ್‌ನಲ್ಲಿ “ಪುಂಗಿ ಊದ್ಕೊಂಡು ಇರುವ ಬದಲು ಇಂದಿರ ಗಾಂಧಿಯವರ ಈ ಪತ್ರ ಓದಿ” ಎಂದು ಬರೆಯಲಾಗಿದೆ.

- Advertisement -

Related news

error: Content is protected !!