




ವಿಟ್ಲ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವಿಟ್ಲ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕರ್ತರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋಹನದಾಸ್ ಉಕ್ಕುಡ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಪಡೆಯಲು ಕಾರಣೀಕರ್ತರಾದ ದೆಹಲಿಯ ಜನತೆಗೆ ಧನ್ಯವಾದ ಅರ್ಪಿಸಿ ನಿರಂತರ ಭ್ರಷ್ಟಾಚಾರಗಳಿಂದ ಜನರ ಅವಿಶ್ವಾಸಕ್ಕೆ ಪಾತ್ರರಾದ ಅರವಿಂದ ಕೇಜ್ರವಾಲ್‌ರ ಆಮ್ ಆದ್ಮ ಪಾರ್ಟಿಗೆ ಇನ್ನೂ ಮುಂದೆ ಭವಿಷ್ಯವಿಲ್ಲ, ಸತತ ಮೂರನೇ ಸಲ ಶೂನ್ಯ ಸಂಪಾದನೆ ಮಾಡಿದ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ದಿನದಿಂದ ದಿನಕ್ಕೆ ಅಧಃಪತನ ಹೊಂದುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯಕುಮಾರ್ ಆಲಂಗಾರು, ಗ್ರಾಮಾಂತರ ಮಂಡಲ ಕಾರ್ಯದರ್ಶಿಗಳಾದ ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹರೀಶ್ ಸಿಎಚ್, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಪಟ್ಟಣ ಪಂಚಾಯತ್ ಸದಸ್ಯರುಗಳಾದ ಅರುಣ್ ವಿಟ್ಲ, ಜಯಂತ್ ಸಿಎಚ್, ಶಕ್ತಿ ಕೇಂದ್ರ ಪ್ರಮುಖ್ ಶಿಶಿರ್ ಗೌಡ, ಮಂಡಲ ಓಬಿಸಿ ಮೋರ್ಚಾ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಮಂಡಲ ಯುವಮೋರ್ಚಾ ಕಾರ್ಯದರ್ಶಿ ನಿತಿನ್ ಬೊಡೊಣಿ, ಪ್ರಮುಖರಾದ ರಾಮದಾಸ್ ಶೆಣೈ, ಅಣ್ಣು ಪೂಜಾರಿ, ನೋಣಯ್ಯ ಪೂಜಾರಿ, ಜಗದೀಶ್ ಪಾಣೆಮಜಲು, ಮಂಜುನಾಥ್ ಕಲ್ಲಕಟ್ಟ, ಜಯ ಕೊಟ್ಟಾರಿ, ಜಯಂತ ಗೌಡ ಉಪಸ್ಥಿತರಿದ್ದರು.