


ವಿಟ್ಲ ಭಾರತೀಯ ಜನತಾ ಪಾರ್ಟಿ ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ ಗುರು ಪೂರ್ಣಿಮೆಯ ಅಂಗವಾಗಿ ವಿಟ್ಲ ಪರಿಸರದ ನಿವೃತ್ತ ಶಿಕ್ಷಕರುಗಳಾದ ಎಚ್. ಸುಬ್ರಹ್ಮಣ್ಯ ಭಟ್, ಮಹಾಬಲೇಶ್ವರ ಭಟ್, ಪಿ.ಡಿ ಶೆಟ್ಟಿಗಾರ್ ವನಭೋಜನ ಮತ್ತು ವರ್ಗಾವಣೆಗೊಳ್ಳುತ್ತಿರುವ ವಿಟ್ಲ ಸಮುದಾಯದ ವೈದ್ಯಾಧಿಕಾರಿ ಡಾ. ವೇದಾವತಿ ಬಲ್ಲಾಳ್ ಹಾಗೂ ಶುಶೂಶಕಿ ಚಂದ್ರಾವತಿ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ವಿದ್ಯಾಧರ ಜೈನ್, ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯ ಕುಮಾರ್ ಆಲಂಗಾರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಿ.ಎಚ್, ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಶಕ್ತಿ ಕೇಂದ್ರ ಸಂಚಾಲಕರುಗಳಾದ ಲಕ್ಷ್ಮಣ ಮಾಡ, ಶಿಶಿರ್ ಗೌಡ, ಸದಾನಂದ ಗೌಡ ಸೇರಾಜೆ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ನಿತಿನ್ ಬೊಡೋಣಿ, ಪ್ರಮುಖರುಗಳಾದ ಮೋಹನದಾಸ್ ಉಕ್ಕುಡ, ರಾಮದಾಸ್ ಶೆಣೈ, ಜಗದೀಶ್ ಪಾಣೆಮಜಲು, ಲೋಕನಾಥ್ ಶೆಟ್ಟಿ ಉಪಸ್ಥಿತರಿದ್ದರು.