Thursday, November 19, 2026
spot_imgspot_img
spot_imgspot_img

ಬಿಜೆಪಿ ಕರೋಪಾಡಿ ಶಕ್ತಿ ಕೇಂದ್ರದ ವತಿಯಿಂದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ

- Advertisement -
- Advertisement -

ಕರೋಪಾಡಿ: ಪಿಂಚಣಿ, ಅಂಗವಿಕಲರ ಭತ್ಯೆ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳು ತಿಂಗಳುಗಟ್ಟಲೆ ಬಾಕಿ ಉಳಿದಿರುವುದನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ ಕರೋಪಾಡಿ ಶಕ್ತಿ ಕೇಂದ್ರದ ವತಿಯಿಂದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆಯ ಮೂಲಕ ಕರೋಪಾಡಿ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಜನಾಂದೋಲನದಲ್ಲಿ ಮಾತನಾಡಿದ ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ ಮತ್ತು ಶಿವಪ್ರಸಾದ್ ಶೆಟ್ಟಿ, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯಗಳು ದೊರೆಯದಿರುವ ಸಮಸ್ಯೆಯನ್ನು ಪ್ರಸ್ತಾಪಿಸಿ, ಬಾಕಿ ಇರುವ ಸೌಲಭ್ಯಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕೊಲ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೇಶವ ರಾವ್ ಮಂಚಿ, ಕರೋಪಾಡಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ ಪಳ್ಳದ ಕೋಡಿ, ನಿವೃತ್ತ ಸೈನಿಕ ಬೇತ ಗೋಪಾಲಕೃಷ್ಣ ಭಟ್, ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕರೋಪಾಡಿ ಬಿಜೆಪಿ ಪ್ರಭಾರಿಗಳಾದ ಅರವಿಂದ ರೈ, ಬಿಜೆಪಿ ಬಂಟ್ವಾಳ ಮಂಡಲ ಮೀನುಗಾರ ಪ್ರಕೋಷ್ಟದ ಸಂಚಾಲಕರಾದ ಯೋಗೀಶ್ ಕುಳ, ರೋಶನ್ ಸಾಂತ, ಮಹಿಳಾ ಪ್ರಮುಖ್ ಶ್ರೀಲತಾ ಕೆ. ಶೆಟ್ಟಿ ಪಟ್ಲ, ಬೂತ್ ಅಧ್ಯಕ್ಷರಾದ ಹರೀಶ್ ಭಟ್ ಕೋಡ್ಲ, ಪದ್ಮನಾಭ ಮುಗುಳಿ, ಜಯರಾಮ ಭಟ್ ಕಟ್ಟತ್ತಾರ್, ಶಶಿಕಿರಣ್ ಶೆಟ್ಟಿ ಆನೆಯಾಲ ಗುತ್ತು, ರಾಮಕೃಷ್ಣ ಭಟ್ ಒಡಿಯೂರು, ಕಾರ್ಯದರ್ಶಿಗಳಾದ ಆದರ್ಶ ಶೆಟ್ಟಿ ಪಟ್ಲ, ಜಯರಾಮ ಗೌಡ ಪದ್ಯಾಣ, ಶ್ರೀನಾಥ್ ನಾಯ್ಕ ಕಲಾಯಿ, ನವೀನ ಶಾರದಕೋಡಿ, ಕರೋಪಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ ದಾಮೋದರ ಶೆಟ್ಟಿ ಆನೆಯಾಲ ಗುತ್ತು, ಅನುರಾಧ ಭಟ್, ನಿಕಟಪೂರ್ವ ಪಂಚಾಯತ್ ಸದಸ್ಯರುಗಳಾದ ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ, ಪ್ರಸನ್ನ ಪದ್ಯಾಣ, ಪಕ್ಷದ ಮುಖಂಡರಾದ ಸಂಕಪ್ಪ ಶೆಟ್ಟಿ ಪಳ್ಳದ ಕೋಡಿ, ರಮೇಶ್ ಶೆಟ್ಟಿ ಆನೆಯಾಲ ಗುತ್ತು, ಕೊರಗಪ್ಪ ಶೆಟ್ಟಿ ಪಟ್ಲ, ರತ್ನಾಕರ ಮೂಲ್ಯ ಕಟ್ಟತ್ತಾರ್, ಜನಾರ್ಧನ ಕುಲಾಲ್ ಕಲಾಯಿ, ಕಿಶೋರ್ ಶೆಟ್ಟಿ ಆನೆಯಾಲ ಗುತ್ತು, ತೇಜಸ್ ಶೆಟ್ಟಿ ಪಟ್ಲ, ವೆಂಕಟೇಶ್ ಭಟ್ ಜಪ್ಪ, ಕೃಷ್ಣ ನಾಯ್ಕ್ ಪದ್ಯಾಣ, ಶೋಭಾ ಶೆಟ್ಟಿ, ವನಮಾಲ ಮೇಲಂಟ, ಸ್ವಾತಿ ಧನಪಾಲ್, ವಿಶಾಲ ಕಿಶೋರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಫಲಾನುಭವಿಗಳ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು.

- Advertisement -

Related news

error: Content is protected !!