Monday, June 30, 2025
spot_imgspot_img
spot_imgspot_img

ದೇಶದಲ್ಲಿ ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ- ಈ ಲಕ್ಷಣಗಳಿದ್ದಲ್ಲಿ ನಿರ್ಲಕ್ಷಿಸಬೇಡಿ: ಡಾ. ಎಂ.ವಿ. ಪದ್ಮಾ ಶ್ರೀವಾತ್ಸವ

- Advertisement -
- Advertisement -

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ ಎಂದು ದೆಹಲಿ ಏಮ್ಸ್‌ ನ್ಯೂರಾಲಜಿ ವಿಭಾಗದ ಪ್ರೊ. ಎಂ.ವಿ. ಪದ್ಮಾ ಶ್ರೀವಾತ್ಸವ ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿ ಸೇರಿದಂತೆ ದೇಶದಲ್ಲಿ ದಿನೇ ದಿನೇ ಬ್ಲಾಕ್ ಫಂಗಸ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ದಿನನಿತ್ಯ ಸುಮಾರು 70 ಹೊಸ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಅನ್ನು ನಿರ್ಲಕ್ಷಿಸುವಂತೆಯೇ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಹರಿಯಾಣ, ಬಿಹಾರ ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬರುತ್ತಿವೆ ಎಂದು ಹೇಳಿದ್ದಾರೆ‌.

ಮಧುಮೇಹವಿರುವ ಕೊರೋನಾ ರೋಗಿಗಳು ಈ ಸಮಯದಲ್ಲಿ ಜಾಗ್ರತೆಯಿಂದಿರುವುದು ತುಂಬಾ ಮುಖ್ಯ. ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಕುರಿತು ನಿಗಾ ವಹಿಸಬೇಕಿದೆ. ಸಕ್ಕರೆ ಅಂಶವನ್ನು ನಿಯಂತ್ರಿಸುವುದು ಅವಶ್ಯ. ಕೊರೋನಾದಿಂದ ಗುಣಮುಖರಾಗಿ ಮತ್ತೊಂದು ಸಮಸ್ಯೆಗೆ ತುತ್ತಾಗಬೇಡಿ ಎಂದು ಡಾ.ಪದ್ಮಾ ಸಲಹೆ ನೀಡಿದ್ದಾರೆ.

ಕಣ್ಣು ಕೆಂಪಾಗುವುದು, ಮೂಗಿನ ಸುತ್ತ ಕೆಂಪಾಗುವುದು, ಜ್ವರ, ತಲೆ ನೋವು, ಕೆಮ್ಮು, ಉಸಿರಾಟದಲ್ಲಿ ತೊಂದರೆ, ರಕ್ತ ವಾಂತಿ ಇವು ಬ್ಲ್ಯಾಕ್ ಫಂಗಸ್‌ನ ಲಕ್ಷಣಗಳು. ಮಧುಮೇಹಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜಸ್ಥಾನದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಬುಧವಾರ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ಸೋಂಕು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.

driving
- Advertisement -

Related news

error: Content is protected !!