Saturday, June 28, 2025
spot_imgspot_img
spot_imgspot_img

ಪೊಲೀಸ್‌ ಠಾಣೆಯಲ್ಲಿ ಕಾವಲು ಕಾಯುತ್ತಿದ್ದ ”ಬೊಗ್ಗಿ” ಶ್ವಾನ ಕಾರು ಅಪಘಾತದಿಂದ ಮೃತ್ಯು; ಕಣ್ಣೀರಿಟ್ಟ ಪೊಲೀಸರು

- Advertisement -
- Advertisement -
vtv vitla

ಬಂಟ್ವಾಳ: ಕಾರು ಅಪಘಾತದಿಂದ ಪೋಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ”ಬೊಗ್ಗಿ” ಎನ್ನುವ ಶ್ವಾನ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಯಿಯ ಸಾವಿಗೆ ಬಂಟ್ವಾಳ ನಗರ ಠಾಣಾ ಪೊಲೀಸರು ಕಣ್ಣೀರು ಹಾಕಿದ ಅಪರೂಪದ ಸನ್ನಿವೇಶ ನಡೆಯಿತು.

ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಗಿಂತಲೂ ಹೆಚ್ಚಿನ ಅವಧಿಯಿಂದ ಪೊಲೀಸ್ ಠಾಣೆಯ ಸದಸ್ಯನಾಗಿದ್ದು, ರಾತ್ರಿ ಪಾಳಿಯಲ್ಲಿ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆಗೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ ತನ್ನ ಕೆಲಸ ಮುಗಿಸಿ ವಾಪಸು ಹೋಗುವ ವೇಳೆ ಕಾರನ್ನು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ನಾಯಿಯ ಮೇಲೆ ಗೊತ್ತಿಲ್ಲದೆ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಘಟನೆಯನ್ನು ಕಂಡ ನಗರ ಠಾಣೆಯ ಪೊಲೀಸರು ಕಣ್ಣೀರು ಹಾಕಿದರು. ಬಳಿಕ ನಾಯಿಯನ್ನು ವಿಶೇಷ ಗೌರವ ನೀಡಿ ಮಣ್ಣು ಮಾಡಲಾಯಿತು.

- Advertisement -

Related news

error: Content is protected !!