ಕಲ್ಲಡ್ಕ: ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲೆಯ 25 ನೇ ವಾರ್ಷಿಕೋತ್ಸವದ ಪ್ರಯುಕ್ತ ರಜತ ರತ್ನ ಸಂಭ್ರಮ ಹಾಗೂ ವಾರ್ಷಿಕ ದಿನಾಚರಣೆ ಡಿ.7ನೇ ಶನಿವಾರ ಮತ್ತು 8ನೇ ಆದಿತ್ಯವಾರ ಜೆಮ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಬೆಳ್ಳಿಹಬ್ಬ ಆಚರಣೆ ಕಾರ್ಯಕ್ರಮವು ಡಿ.7ನೇ ಶನಿವಾರ 9:30ಕ್ಕೆ ನಡೆಯಲಿದೆ. ಫಾತಿಮಾ ಮೆಮೋರಿಯಲ್ ಎಜುಕೇಶನಲ್ ಟ್ರಸ್ಟ್ (ರಿ.)ಇದರ ಅಧ್ಯಕ್ಷ ಹಾಜಿ ಜಿ. ಅಬೂಬಕ್ಕರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕರ್ನಾಟಕ ವಿಧಾನ ಸಭೆ ಸ್ಪೀಕರ್ ಯು.ಟಿ ಖಾದರ್ ಫರೀದ್ ರಜತ ರತ್ನ ಸ್ಮರಣಿಕೆ ಬಿಡುಗಡೆಗೊಳಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಬೆಳ್ಳಿಹಬ್ಬದ ಫಲಕವನ್ನು ಅನಾವರಣಗೊಳಿಸಲಿದ್ದಾರೆ. ಬ್ಲೂ ರಾಯಲ್ ಗ್ರೂಪ್ ಆಫ್ ಕಂಪನಿಯ ಎಂಡಿ ರೋನಾಲ್ಡ್ ಮಾರ್ಟಿಸ್ ವಸ್ತುಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಯು, ಕರ್ನಾಟಕ ಮಾಜಿ ಸಚಿವ ಬಿ ರಮಾನಾಥ ರೈ, ಉಡುಪಿ ಮತ್ತು ದಕ್ಷಿಣ ಕನ್ನಡ ಎಂಇಐಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಡಿಡಿಪಿಐ ವೆಂಕಟೇಶ ಪಟಗಾರ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪ್ರೇಮಾ ಪುರುಷೋತ್ತಮ್, ಬ್ಲಾಕ್ ಶಿಕ್ಷಣ ಕಛೇರಿ ಬಂಟ್ವಾಳ ಮಂಜುನಾಥನ್ ಎಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಾರ್ಷಿಕ ದಿನಾಚರಣೆಯು ಡಿ. 8ನೇ ಆದಿತ್ಯವಾರ 9:30ಕ್ಕೆ ನಡೆಯಲಿದೆ. ಫಾತಿಮಾ ಮೆಮೋರಿಯಲ್ ಎಜುಕೇಶನಲ್ ಟ್ರಸ್ಟ್(ರಿ.) ಇದರ ಆಡಳಿತ ಟ್ರಸ್ಟಿ, ಹಾಜಿ ಜಿ. ಮೊಹಮ್ಮದ್ ಹನೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತ್ ಇನ್ಫ್ರಾಟೆಕ್, ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ಎಸ್.ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.