Saturday, June 13, 2026
spot_imgspot_img
spot_imgspot_img

ಬೈರಂಪಳ್ಳಿ: ಮಕ್ಕಳಿಗೆ ಪುಸ್ತಕ ಹಾಗೂ ಕ್ರೀಡಾ ಸಮವಸ್ತ್ರ ವಿತರಣೆ

- Advertisement -
- Advertisement -

ಬೈರಂಪಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ 41 ನೇ ಶಿರೂರ್ ಗ್ರಾಮದ ೧ ನೇ ವಾರ್ಡ್ ನ ನ್ಯೂ ಕಲ್ಲಾಳ ಸ.ಕಿ.ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಡಾ ಸಂತೋಷ್ ಕುಮಾರ್ ಬೈರಂಪಳ್ಳಿರವರ ನೇತೃತ್ವದ್ದಲ್ಲಿ ಪ್ರತಿ ವರ್ಷದಂತೆ 2025-26 ನೇ ಸಾಲಿನ ಮಕ್ಕಳಿಗೆ ಪೂರ್ಣ ವರ್ಷಕ್ಕೆ ಬೇಕಾಗುವ ಪುಸ್ತಕಗಳು ಒಳಗೊಂಡ ಇತರ ವಸ್ತುಗಳು ಮತ್ತು ಈ ವರ್ಷದ ಎಲ್ಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರವನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ವತಿಯಿಂದ ವಿತರಿಸಲಾಯಿತು.

ಪುಟ್ಟ ಮಕ್ಕಳೊಂದಿಗೆ ಭವಿಷ್ಯದ ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದ ಆಯ್ಕೆಯ ಕುರಿತು ಸಂವಹನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷರು ಶ್ರೀಮತಿ ಶಶಿಕಲಾ ಪೂಜಾರಿ, ಶ್ರಮಿಕ ತರುಣರ ತಂಡ ಬೈರಂಪಳ್ಳಿ ಮಹಿಳಾ ಘಟಕದ ಅಧ್ಯಕ್ಷರು ಶ್ರೀಮತಿ ಸಂಪ ಪೂಜಾರಿ, ಶಾಲಾ ಮುಖ್ಯೋದ್ಯಾಪಕರು ಶ್ರೀಮತಿ ಶಾಂತಾ ಶಾಸ್ತ್ರೀ, ಶಿಕ್ಷಕಿ ಶ್ರೀಮತಿ ಸವಿತ, ತಂಡದ ಕೋಶಾದಿಕಾರಿ ಶ್ರೀ ಸೂರಜ್ ಆಚಾರ್ಯ, ಗ್ರಾಮಸ್ಥರು ಮತ್ತು ಪುಟಾಣಿಮಕ್ಕಳು ಉಪಸ್ಥಿತರಿದ್ದರು.

- Advertisement -

Related news

error: Content is protected !!