


ವಿಟ್ಲ: ದ್ವಿಚಕ್ರ ವಾಹನವೊಂದು ಬಾಲಕನಿಗೆ ಡಿಕ್ಕಿ ಹೊಡೆದು ಬಾಲಕನು ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ಎಂಬಲ್ಲಿ ನಡೆದಿದೆ.
ಗೀತಾ ಎಂಬವರು ತನ್ನ ಮಗನಾದ ಅದ್ವೈತ್(12 ವರ್ಷ) ನನ್ನು ದಿನಾಂಕ: 28.05.2024 ರಂದು ಬೆಳಿಗ್ಗೆ, ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ಮನೆಯ ಪಕ್ಕದ ಹೋಟೇಲ್ ನಿಂದ ಹಾಲು ತರಲೆಂದು ಕಳುಹಿಸಿಕೊಟ್ಟಿದ್ದು, ಈ ವೇಳೆ ಪುತ್ತೂರು ಕಡೆಯಿಂದ KA-19-EF-8417 ನೇ ಮೋಟಾರ್ ಸೈಕಲ್ ಸವಾರ ಸುಜನ್ ರವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಅದ್ವೈತ್ ಗೆ ಡಿಕ್ಕಿ ಹೊಡೆದಿದ್ದಾನೆ
ಪರಿಣಾಮ ಅದ್ವೈತ್ ಮತ್ತು ಮೋಟಾರ್ ಸೈಕಲ್ ಸವಾರ ಸುಜನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಮಗುಚಿ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಗೀತಾ ಹಾಗೂ ಇತರರು, ಗಾಯಾಳು ಅದ್ವೈತ್ ನನ್ನು ಉಪಚರಿಸಿ, ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ, ಅ.ಕ್ರ 95/2024, ಕಲಂ: 279,337 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.