Saturday, May 4, 2024
spot_imgspot_img
spot_imgspot_img

ಪುಣಚ: ಶ್ರೀ ಉರಿಮಹಾಕಾಳಿ ದೈವಸ್ಥಾನದಲ್ಲಿ ವೈಭವದ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಾಗಪ್ರತಿಷ್ಠೆ ಹಾಗೂ ಶ್ರೀ ದೈವಗಳ ನೃತ್ಯೋತ್ಸವ

- Advertisement -G L Acharya panikkar
- Advertisement -

ಪುಣಚ: ಪುಣಚ ಗ್ರಾಮದ ಪರಿಯಾಲ್ತಡ್ಕ ಮೂರಿಬೆಟ್ಟು ಶ್ರೀ ಉರಿಮಹಾಕಾಳಿ ದೈವಸ್ಥಾನ ಸೇವಾ ಟ್ರಸ್ಟ್‌ (ರಿ) ಇಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಾಗಪ್ರತಿಷ್ಠೆ ಹಾಗೂ ಶ್ರೀ ದೈವಗಳ ನೃತ್ಯೋತ್ಸವ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಸಂಜೆ ಮಹಿಷಮರ್ಧಿನಿ ಸಿಂಗಾರಿ ಮೇಳ ಪುಣಚ ಇವರ ಸಿಂಗಾರಿಮೇಳದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಆಗಮನವಾಯಿತು.

ಬಳಿಕ ಓಂಕಾರ ಭಜನಾ ವೃಂದ ಮುಳ್ಳೇರಿಯಾ ಪ್ರಜಿತ್‌ ಕಾಕುಂಜೆ ಮತ್ತು ಬಳಗದವರಿಂದ ಭಜನಾಮೃತ ನಡೆಯಿತು.
ರಾತ್ರಿ 7 ಗಂಟೆಗೆ ಪುಣ್ಯಾಹವಾಚನ, ಸ್ಥಳ ಶುದ್ದಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಎ.22 ರಂದು ಬೆಳಗ್ಗೆ ಶ್ರೀ ದೈವಗಳ ಪ್ರತಿಷ್ಠೆ, ನಾಗ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಯಿತು. ನಂತರ ಹರಿಸೇವೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.
ನಂತರ ಕುಟುಂಬದ ಮಹಿಳಾ ವೃಂದರವರಿಂದ ಭಜನಾ ಸೇವೆ ನಡೆಯಿತು. ನಂತರ ಶ್ರೀ ವಿಷ್ಣುಮೂರ್ತಿ, ಧೂಮಾವತಿ ಭಜನಾ ಸಂಘ ವಿಷ್ಣುನಗರ ಕಿನ್ನಿಂಗಾರು ಇವರಿಂದ ಭಜನಾಮೃತ ಸೇವೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ನಂತರ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದೇವರ ನಾಮಗಳು ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಬಳಿಕ ಧರ್ಮದೈವ ಉರಿಮಹಾಕಾಳಿ ನೃತ್ಯೋತ್ಸವ ನಂತರ ರಕ್ತೇಶ್ವರಿ ದೈವದ ನೃತ್ಯೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!