- Advertisement -
- Advertisement -





ಬ್ರಹ್ಮಾವರ: ಮನೆಗೆ ನುಗ್ಗಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಚಾಂತಾರು ಗ್ರಾಮದಲ್ಲಿ ನಡೆದಿದೆ.
ವಿಜಯ ಎಂಬರ ಮನೆಯಿಂದ ಕಳವು ಮಾಡಿರುತ್ತಾರೆ.
ವಿಜಯ ಎಂಬರ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಕಾಪಾಟಿನಲ್ಲಿಟ್ಟಿದ್ದ 12 ಗ್ರಾಂ ತೂಕದ 2 ಚಿನ್ನದ ಬಳೆ, 24 ಗ್ರಾಂ ತೂಕದ 1 ಹವಳದ ಸರ, 9 ಗ್ರಾಂ ತೂಕದ 3 ಚಿನ್ನದ ಉಂಗುರ ಹಾಗೂ 4 ಗ್ರಾಂ ತೂಕದ 1 ಜೊತೆ ಕಿವಿ ಓಲೆ ಸೇರಿದಂತೆ ಒಟ್ಟು 2,45,000ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -