Saturday, June 28, 2025
spot_imgspot_img
spot_imgspot_img

ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು- ಆರೋಪಿ ಬಂಧನ

- Advertisement -
- Advertisement -

ಕಾಸರಗೋಡು :ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಗಂಟೆಯೊಳಗೆ ಪೊಲೀಸರು ಬಂಧಿಸಿದ ಘಟನೆ ಕಾಞ೦ಗಾಡ್ ನಲ್ಲಿ ನಡೆದಿದೆ .

ಕಾಞ೦ಗಾಡ್ ರೈಲ್ವೆ ನಿಲ್ದಾಣ ಸಮೀಪದ ಪಿ . ಎಚ್ ಆಶಿಫ್ ( 22) ಬಂಧಿತ ಆರೋಪಿ.

ಮಂಗಳವಾರ ಮಧ್ಯಾಹ್ನ ನೀಲೇಶ್ವರ ಪಳ್ಳಿಕೆರೆಯ ಸುಕುಮಾರನ್ ರವರ ಪತ್ನಿ ಮನೆಗೆ ಬೀಗ ಹಾಕದೆ ನೆರೆಮನೆಗೆ ತೆರಳಿದ್ದು , ಈ ಸಂದರ್ಭದಲ್ಲಿ ಈತ ಮನೆಗೆ ನುಗ್ಗಿ ಕಳವು ನಡೆಸಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾತ್ರಿ ವೇಳೆಗೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ವಿರುದ್ಧ ಕಾಸರಗೋಡು , ಕಾಞ೦ಗಾಡ್ , ನೀಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೊದಲಾದ ಕಡೆಗಳಲ್ಲಿ 12ಕ್ಕೂ ಅಧಿಕ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!