Saturday, July 5, 2025
spot_imgspot_img
spot_imgspot_img

ಬಾಯ್ ಫ್ರೆಂಡ್ ಗಾಗಿ ಅಣ್ಣನ ಕೊಲೆ ಪ್ರಕರಣ: ಕನ್ನಡದ ನಟಿ ಮತ್ತು ಆಕೆಯ ಪ್ರೇಮಿಯ ಬಂಧನ!

- Advertisement -
- Advertisement -

ಹುಬ್ಬಳ್ಳಿ: ತನ್ನ ಬಾಯ್ ಫ್ರೆಂಡ್ ಸಹಾಯದಿಂದಾಗಿ ಸಹೋದರನನ್ನೇ ಭೀಕರವಾಗಿ ಹತ್ಯೆ ಮಾಡಿದಂತ ನಟಿ ಶನಾಯಾ ಕಾಟ್ವೆ ಹಾಗೂ ಆಕೆಯ ಬಾಯ್ ಫ್ರೆಂಡ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಟಿ ಶನಾಯಾ ಕಾಟ್ವೆ ಹಾಗೂ ಆಕೆಯ ಬಾಯ್ ಫ್ರೆಂಡ್ ಸೇರಿಕೊಂಡು, ಆಕೆಯ ಸಹೋದರನನ್ನು ತುಂಡು ತುಂಡಾಗಿ ಕತ್ತರಿಸಿ, ದೇವರ ಗುಡಿಹಾಳ್ ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರಕರಣದ ತನಿಖೆಯನ್ನು ಕೈಗೊಂಡ ಹುಬ್ಬಳ್ಳಿಯ ಗ್ರಾಮಾಂತರ ಠಾಣೆ ಪೊಲೀಸರು, ಇದೀಗ ನಟಿ ಶನಾಯಾ ಕಾಟ್ವೆ, ನಿಯಾಜ ಹೆಮೆದ್ ಕಾಟಿಗರ್, ಟೌಸಿಫ್ ಚನ್ನಾಪುರ, ಅಲ್ತಾಫ್ ಮುಲ್ಲಾ ಮತ್ತು ಅಮನ್ ಗಿರಾನಿವಾಲೆ ಎಂಬುವರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಚಿತ್ರನಟಿ ಶನಾಯ ಕಾಟ್ವೆಯ ಸಹೋದರ ರಾಕೇಶ ಕಾಟ್ವೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದಂತ ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದರು. ಅನುಮಾನದ ಮೇಲೆ ನಟಿ ಶನಾಯ ಕಾಟ್ವೆ ವಿಚಾರಣೆಗೆ ಒಳಪಡಿಸಿದಾಗ ಏಪ್ರಿಲ್ 13ರಂದು ನಮ್ಮ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬುದಾಗಿ ತಿಳಿದ ಮೇಲೆ ನನಗೆ ಕೊಲೆ ವಿಚಾರ ಗೊತ್ತಾಗಿದ್ದು ಎಂಬುದಾಗಿ ತಿಳಿಸಿದ್ದರು.

ವಿಚಾರಣೆ ಮುಂದುವರೆಸಿದ ಪೊಲೀಸರು, ಆಕೆಯ ಕಾರಿನಲ್ಲೇ ಸಹೋದರನ ಶವ ಇರೋದು ಪತ್ತೆಯಾಗಿತ್ತು. ವಿಚಾರಣೆ ಮತ್ತಷ್ಟು ಚುರುಕುಗೊಳಿಸಿದಾಗ, ಸಹೋದರನ ಕೊಲೆಯಲ್ಲಿ ತನ್ನ ಪಾತ್ರ ಇರೋದಾಗಿ ಒಪ್ಪಿಕೊಂಡಿದ್ದಳು. ಅಲ್ಲದೇ ಪ್ರಾಥಮಿಕ ತನಿಖೆಯಲ್ಲಿ ನಟಿ ಶಾನಾ ಹಾಗೂ ಬಾಯ್ ಫ್ರೆಂಡ್ ನಿಯಾಜ್ ನಡುವಿನ ಪ್ರೇಮಕ್ಕೆ ಅಡ್ಡಿಯಾಗಿದ್ದರಿಂದಾಗಿಯೇ ಸಹೋದರ ರಾಕೇಶ್ ಕಾಟ್ವೆ ಕೊಲೆ ಮಾಡಿರೋದಾಗಿ ತಿಳಿದು ಬಂದಿತ್ತು.

ಈ ಎಲ್ಲಾ ತನಿಖೆಯ ಬಳಿಕ, ಮೊದಲ ಆರೋಪಿ ಹಾಗೂ ನಟಿ ಶನಾಯ ಕಾಟವೆ ಅವಳ ಪ್ರಿಯತಮ ನಿಜಾಯ್‌, ಸೋದರ ಮಲ್ಲಿಕ್‌ (18), ಫಿರೋಜ್‌ (18) ಹಾಗೂ ನಿಜಾಜ್‌ನ ತಂದೆ ಸೈಫುಲ್ಲಾ (55) ರವರನ್ನು ಬಂಧಿಸಲಾಗಿದೆ. ಅಲ್ಲದೇ ತೀವ್ರ ವಿಚಾರಣೆಗೊಳಡಿಸಿದ್ದಾರೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದು, ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

driving
- Advertisement -

Related news

error: Content is protected !!