Friday, April 19, 2024
spot_imgspot_img
spot_imgspot_img

ಬಜೆಟ್ 2021-ಚಿನ್ನ, ಬೆಳ್ಳಿ, ಕಬ್ಬಿಣ, ಇನ್ಸೂರೆನ್ಸ್ ಅಗ್ಗ-ಮದ್ಯ, ಮೊಬೈಲ್, ಜೆಮ್ಸ್ ದುಬಾರಿ

- Advertisement -G L Acharya panikkar
- Advertisement -

ನವದೆಹಲಿ: ಸ್ವದೇಶಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಮೇಡ್ ಇನ್ ಇಂಡಿಯಾ ವಸ್ತುಗಳು ಅಗ್ಗವಾಗಲಿವೆ. ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ, ಬೆಳ್ಳಿ ಅಗ್ಗವಾಗಲಿದೆ. ವಿದೇಶಿ ಮೊಬೈಲ್‌, ಚಾರ್ಜರ್, ವಿದೇಶಿ ಟಿವಿ, ಫ್ರಿಜ್ಜ್ ಮತ್ತಷ್ಟು ದುಬಾರಿಯಾಗಲಿದೆ. ಸುಂಕ ಹೆಚ್ಚಳದಿಂದಾಗಿ ಮದ್ಯ ದುಬಾರಿಯಾಗಲಿದೆ.


ಕೊರೋನಾದಿಂದ ಹದಗೆಟ್ಟಿರುವ ಆರ್ಥಿಕತೆಯ ನಡುವೆ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಯಾರಿಗೂ ಹೊರೆಯಾಗದಂತೆ, ಉಡುಗೊರೆಯೂ ಇಲ್ಲದ ರೀತಿಯ ಬಜೆಟ್ ನೀಡಿದ್ದಾರೆ.
ಎಂಎಸ್​ಎಂಇ ಉತ್ಪನ್ನಗಳ ಮೇಲಿನ ಸುಂಕವನ್ನು ಇಳಿಕೆ ಮಾಡಲಾಗಿದ್ದು, ಆರ್ಥಿಕ ಚೇತರಿಕೆ ದೃಷ್ಟಿಯಿಂದ ಬಜೆಟ್​ ಮಂಡನೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ, ಆಟೋ ಮೊಬೈಲ್‌ ಉತ್ಪನ್ನಗಳ ಸುಂಕ, ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಸುಂಕ, ರೆಡಿಮೇಡ್ ವಸ್ತುಗಳ ಮೇಲಿನ ಆಮದು ಸುಂಕ, ವಿದೇಶಿ ಬಟ್ಟೆಗಳ ಆಮದು ಸುಂಕ ಮತ್ತು ಕಚ್ಚಾ ರೇಷ್ಮೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ.


ಯಾವುದು ಅಗ್ಗ?:
ಕಬ್ಬಿಣ, ಉಕ್ಕು, ನೈಲಾನ್​ ಬಟ್ಟೆಗಳು, ಇನ್ಸೂರೆನ್ಸ್​, ಪಾದರಕ್ಷೆ, ಚಿನ್ನ, ಬೆಳ್ಳಿ ಅಗ್ಗವಾಗಲಿವೆ.
ಯಾವುದು ದುಬಾರಿ?: ಪೆಟ್ರೋಲ್​, ಡೀಸೆಲ್​, ಎಲೆಕ್ಟ್ರಾನಿಕ್ಸ್​ ವಸ್ತುಗಳು, ಮೊಬೈಲ್​ ಫೋನ್​ಗಳು, ಚಾರ್ಜರ್ಸ್​, ಜೆಮ್ಸ್​ (ಹರಳುಗಳು), ವಿದೇಶದಿಂದ ಬರುವ ವಾಹನ ಬಿಡಿಭಾಗಗಳು, ಚರ್ಮ ಉತ್ಪನ್ನಗಳು, ವಿದೇಶದಿಂದ ಆಮದಾಗುವ ವಸ್ತುಗಳು, ಕೃಷಿ ಉತ್ಪನ್ನಗಳು, ಪ್ಲಾಸ್ಟಿಕ್​, ಮದ್ಯ ದುಬಾರಿಯಾಗಲಿವೆ.

- Advertisement -

Related news

error: Content is protected !!