Wednesday, May 8, 2024
spot_imgspot_img
spot_imgspot_img

ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ವೇಳೆ ಅನ್ಯಕೋಮಿನ ಯುವಕನಿಂದ ಗಂಡನಿಗೆ ಹಲ್ಲೆ- ಪುತ್ತೂರಿನ ಕುದುರೆ ವ್ಯಾಪಾರಿ ಸಿರಾಜುದ್ದೀನ್‌ನಿಂದ ಕೃತ್ಯ: ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಗೈದು, ಬೆದರಿಕೆಯೊಡ್ಡಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ನಡೆದಿದೆ. ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್ ಭಟ್ ಎಂಬವರು ಸ್ನೇಹಿತರನ್ನು ಮಾತನಾಡಿಸಲೆಂದು ಕಂಬದ ಕೋಣೆ ರೈಲ್ವೇ ಗೇಟಿನ ಹತ್ತಿರ ವಾಹನ ನಿಲ್ಲಿಸಿದ್ದ ವೇಳೆ, ಸುರೇಶ್ ಎಂಬವರ ಪತ್ನಿ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯ ಕೋಮಿನ ಯುವಕನೊಂದಿಗೆ ನ್ಯಾನೋ ಕಾರಿನಲ್ಲಿ ಕಾಣಸಿಕ್ಕಿರುತ್ತಾರೆ. ಈ ವೇಳೆ ಸುರೇಶ್ ಎಂಬವರು ತನ್ನ ವಾಹನದಿಂದ ಇಳಿದು ಹೆಂಡತಿಯ ಬಳಿ ಪ್ರಶ್ನಿಸುತ್ತಿದ್ದ ವೇಳೆ ಸಿರಾಜುದ್ದೀನ್ ಎಂಬಾತನು ಏಕಾಏಕಿಯಾಗಿ ಇದನ್ನು ಕೇಳಲು ಯಾರು ಎಂಬುದಾಗಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾನೆ. ಹಲ್ಲೆಗೊಳಗಾದ ಸುರೇಶ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಸಿಜು ಅಲಿಯಾಸ್ ಸಿರಾಜುದ್ದೀನ್ ಯಾನೆ ಬೈಂದೂರಿನ ಸೂರಜ್‌ನನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಯಾರೀತ ಬಹುನಾಮ ಕಿಲಾಡಿ ಅಂತೀರಾ..?

ಮೂಲತ: ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ ಪುತ್ತೂರಿನಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಆಗಿದ್ದ ಈತನ ಮೇಲೆ ಪುತ್ತೂರು ಆಸು ಪಾಸಿನಲ್ಲಿ ಅನೇಕ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂಬ ಆರೋಪವಿದೆ. ಅಲ್ಲದೆ, ತಾನು ಕೊರಳಿಗೆ ಚಿನ್ನದ ಮಾಲೆ ಧರಿಸಿ ಕೈಯಲ್ಲಿ ನೂಲು ಕಟ್ಟಿಕೊಂಡು ತಾನೊಬ್ಬ ಹಿಂದೂ ಎಂಬಂತೆ ವರ್ತಿಸಿ ಸಿಜು ಎಂದು ಪರಿಚಯಿಸಿ, ಹಲವು ಹೆಣ್ಣು ಮಕ್ಕಳ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ ಎಂಬ ಆರೋಪ ಕೂಡ ಇದೆ.

ಕೊರೋನಾ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿರುತ್ತಾನೆ. ’ಜೈ ಭಾರತ್’ ಎಂಬ ಆಂಬ್ಯುಲೆನ್ಸ್ನ್ನು ಲಾಡ್ಜ್ ತರ ಉಪಯೋಗಿಸಿ, ಕುದುರೆ ವ್ಯಾಪಾರ ನಡೆಸುತ್ತಿದ್ದನು ಎಂಬ ಆರೋಪ ಕೂಡ ಕೇಳಿಬಂದಿದೆ.

ಇತ್ತೀಚೆಗೆ ಸುಮಾರು ಎಂಟು ತಿಂಗಳಿನಿಂದ ದೂರುದಾರರಾದ ಸುರೇಶ್ ಭಟ್ ಮತ್ತು ಅವರ ಪತ್ನಿಯ ನಡುವೆ ಸಂಬಂಧ ಬಿರುಕುಗೊಳಿಸಿ ಅವರನ್ನು ಬೇರೆ ಬೇರೆ ಮಾಡಲು ಪ್ರಯತ್ನಿಸುತ್ತಿದ್ದ. ಆ ಬಳಿಕ ಸುರೇಶ್ ಭಟ್‌ರವರ ಪತ್ನಿ ತವರೂರಿಗೆ ಹೋಗಿರುತ್ತಾರೆ. ಚಾಳಿ ಬಿಡದ ಈ ಅಸ್ಸಾಮಿ ಆರು ತಿಂಗಳಿನಿಂದ ಪುತ್ತೂರಿನ ಕಡೆ ತಲೆ ಹಾಕದೆ, ಅವರ ಜೊತೆ ನೆಪ ಮಾತ್ರಕ್ಕೆ ಕಾರಿನ ಡ್ರೈವರ್ ಆಗಿ ಅವರ ಜೊತೆ ಬೈಂದೂರಿನಲ್ಲಿ ವಾಸವಾಗಿರುತ್ತಾನೆ. ತನಗೆ ತಾನೇ ಸೂರಜ್ ಎಂಬ ಹೆಸರನ್ನಿಟ್ಟು ಬೈಂದೂರಿನ ಸೂರಜ್ ಆಗಿ ಸ್ಥಳೀಯರಿಗೆ ಚಳ್ಳೆ ಹಣ್ಣು ತಿನ್ನಿಸುವ ಕೆಲಸ ಮಾಡಿದ್ದಾನೆ.

ಈ ಬಗ್ಗೆ ಎಚ್ಚೆತ್ತುಕೊಂಡ ಹಿಂದೂ ಸಂಘಟನೆಗಳು ಆರೋಪಿ ಸಿಜು ಅಲಿಯಾಸ್ ಸಿರಾಜುದ್ದೀನ್ ಯಾನೆ ಸೂರಜ್‌ನನ್ನು ಬಂಧಿಸಿ, ಈತನನ್ನು ವಿಚಾರಣೆಗೆ ಒಳಪಡಿಸಿ ಈತನ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಈತ ಬೇರೆ ಬೇರೆ ಹೆಸರನ್ನಿಟ್ಟುಕೊಂಡು ಹಿಂದೂ ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಲವ್ ಜಿಹಾದ್ ಮಾಡುತ್ತಿದ್ದಾನೆ ಮತ್ತು ಸುರೇಶ್ ಭಟ್‌ರವರ ಪ್ರಕರಣದಲ್ಲಿ ಅವರ ಕುಟುಂಬವನ್ನು ಲವ್‌ಜಿಹಾದ್ ಗೆ ಪ್ರೇರೇಪಿಸುತ್ತಿದ್ದಾನೆ ಎಂಬ ಸಂಶಯ ಇರುವ ಕಾರಣ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಸಿರಾಜುದ್ದೀನ್‌ನನ್ನು ತನಿಖೆ ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

- Advertisement -

Related news

error: Content is protected !!