Thursday, June 18, 2026
spot_imgspot_img
spot_imgspot_img

ಪಾದಚಾರಿಗೆ ಟ್ಯಾಂಕರ್‍ ಡಿಕ್ಕಿ; ಓರ್ವ ಯುವತಿ ಮೃತ್ಯು, ಇಬ್ಬರು ಗಂಭೀರ..!

- Advertisement -
- Advertisement -

ಪಟ್ಟಣದ ಕೋರ್ಟ್‌ ಸರ್ಕಲ್‌ನಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದು ಓರ್ವ ಯುವತಿ ಸಾವನ್ನಪ್ಪಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಹೊಸಕೋಟೆ ನಡೆದಿದೆ.

ಮೃತಪಟ್ಟ ಯುವತಿ ಸುಧಾ (20) ಹಾಗೂ ಗಂಭೀರ ಗಾಯಗೊಂಡವರು ಮುಳಬಾಗಿಲಿನ ಬೈಕ್ ಸವಾರ ನಜೀರ್ ಖಾನ್‌ಗೆ(65),ಕ್ಯಾಂಟರ್ ಚಾಲಕ ಕೊಲ್ಕತ್ತಾ ಮೂಲದ ಷರೀಪ್ ಉಲ್ಲಾನಿಗೂ (30) ಎಂದು ಗುರುತಿಸಲಾಗಿದೆ.

ಯುವತಿಯ ಬಲಿ ಪಡೆದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಮತ್ತೊಬ್ಬ ಬೈಕ್ ಸವಾರ ಹಾಗೂ ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಇನ್ನು ಕೆಎಸ್ ಆರ್ ಟಿಸಿ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವತಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಗಾಯಳುಗಳನ್ನು ಹೊಸಕೋಟೆ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!