Thursday, July 23, 2026
spot_imgspot_img
spot_imgspot_img

ಪಾದಚಾರಿ ಮಾರ್ಗಕ್ಕೆ ನುಗ್ಗಿದ ಮದ್ಯಪಾನ ಚಾಲಕರ ಕಾರು; ಕೂದಲೆಳೆಯ ಅಂತರದಲ್ಲಿ ಆರು ಮಂದಿ ಪಾರು

- Advertisement -
- Advertisement -

ಬೆಂಗಳೂರು: ಇಂದಿರಾನಗರದ 18ನೇ ಮುಖ್ಯರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಬುಧವಾರ ರಾತ್ರಿ ನಡೆದಿದೆ.


ಜನವರಿ 8ರಂದು ರಾತ್ರಿ ಸುಮಾರು 11.34ರ ವೇಳೆಗೆ ವೇಗವಾಗಿ ಬಂದ ಕಾರೊಂದು ರಸ್ತೆಯ ಮಧ್ಯದಲ್ಲಿದ್ದ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದತ್ತ ನುಗ್ಗಿತು. ಈ ವೇಳೆ ಹೋಟೆಲ್ ಮುಂದೆ ನಿಂತಿದ್ದ ಆರು ಮಂದಿ ತಕ್ಷಣವೇ ಬದಿಗೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯ ಹೋಟೆಲ್‌ಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಕಾರು ವಿಭಜಕದ ಮೇಲೆ ಹತ್ತಿ ಮತ್ತೊಂದು ಬದಿಗೆ ಹಾರಿ ಹೋಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.


ಕಾರನ್ನು ಡೇರಿಕ್ ಟೋನಿ (42) ಎಂಬವರು ಚಾಲನೆ ಮಾಡುತ್ತಿದ್ದರು. ತಿರುವಿನಲ್ಲಿ ಕಾರನ್ನು ಎಡಕ್ಕೆ ತಿರುಗಿಸುವ ಬದಲಿಗೆ ಬಲಕ್ಕೆ ತೆಗೆದುಕೊಂಡಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿ ಇದ್ದುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ಈ ಸಂಬಂಧ ಜೀವನ್‌ವಿಮಾ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

https://twitter.com/i/status/2009974794318667949

- Advertisement -

Related news

error: Content is protected !!