- Advertisement -
- Advertisement -
ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಯುಎಸ್‌ನ (US) ಲಾಂಪಾಸ್ ಎಂಬಲ್ಲಿ ನಡೆದಿದೆ.
ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮನಿ (45), ಪತ್ನಿ ಪ್ರದೀಪಾ ಅರವಿಂದ್ (40) ಹಾಗೂ ಪುತ್ರಿ ಆಂಡ್ರಿಲ್ ಅರವಿಂದ್ (17) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ 5:45ರ ಸುಮಾರಿಗೆ ಯುಎಸ್‌ನ ಟೆಕ್ಸಾಸ್‌ನಲ್ಲಿ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.. ದಂಪತಿ 14 ವರ್ಷದ ಪುತ್ರನನ್ನು ಅಗಲಿದ್ದಾರೆ. ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. 17 ವರ್ಷದ ಆಂಡ್ರಿಲ್, ಪ್ರೌಢಶಾಲೆ ಮುಗಿಸಿದ್ದು, ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕೆ ಪಡೆಯಲು ಪಾಲಕರೊಂದಿಗೆ ಹೋಗುತ್ತಿದ್ದಳು. ಆಕೆ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ಮುಂದಾಗಿದ್ದಳು. ಆದರೆ ಇದೀಗ ಇಡೀ ಕುಟುಂಬವೇ ಅಪಘಾತಕ್ಕೆ ಬಲಿಯಾಗಿದೆ.
- Advertisement -