- Advertisement -
- Advertisement -
ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಎಂಬಲ್ಲಿ ಕಾರಿನಡಿಗೆ ಬಿದ್ದು ಮೂರು ವರ್ಷದ ಮಗು ದಾರುಣ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಡುಪದವಿನ ಫಾರೂಕ್ ಎಂಬವರ ಮೂರು ವರ್ಷದ ಮಗು ಹೆಸರು ಫಾಹಿಮಾ ಮೃತ ದುರ್ದೈವಿ.
ನಡುಪದವು ನಿವಾಸಿಯೊಬ್ಬರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಮನೆಯಿಂದ ಮಗು ಏಕಾಏಕಿ ರಸ್ತೆಗೆ ಓಡಿ ಬಂದಿದ್ದು ಇದನ್ನು ಗಮನಿಸದ ಚಾಲಕ ಕಾರ್ ಚಲಾಯಿಸಿದ ಪರಿಣಾಮ ಮಗು ಚಕ್ರದಡಿಗೆ ಬಿದ್ದು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -